ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮೇ 9: ಭಾರತದಲ್ಲಿ ಕೊರೊನಾ ವೈರಸ್ ಘೋಷಣೆಯಾಗಿ ಲಾಕ್ಡೌನ್ ಮೂರನೆ ಹಂತಕ್ಕೆ ದಾಟಿದ್ದು ಮೇ 17ರವರೆಗೆ ಲಾಕ್ಡೌನ್ ಇರಲಿದೆ. ಇದರ ನಂತರ ಪರಿಸ್ಥಿತಿ ಏನು ಎಂಬ ಕುರಿತು ಈಗ ಕೇಂದ್ರ ಸರಕಾರದ ಅಧಿಕಾರಿ ವರ್ಗದಿಂದ ಕೆಲವು ಸೂಚನೆಗಳು ಹೊರಗೆ ಬಂದಿವೆ ಎಂದು ಇಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ. ಮೂರನೆ ಹಂತದ ಲಾಕ್ಡೌನ್ ಘೋಷಿಸಿದಾಗ ಕೆಲವು ಸಡಿಲಿಕೆಗಳು ವಿನಾಯಿತಿಗಳು ಇದ್ದವು. ಆದರೆ ಅದು ಅಸ್ಪಷ್ಟವಾಗಿದ್ದು ಅಧಿಕಾರವನ್ನು ಪ್ರಾದೇಶಿಕ ಮಟ್ಟದಲ್ಲಿ ಕೇಂದ್ರಿಕರಿಸಿದೆ , ಅಧಿಕಾರಿಗಳ (ಉದ್ಯೋಗ್ ರಾಜ್) ಮೇಲುಗೈಗೆ ಅವಕಾಶ ಮಾಡಿಕೊಟ್ಟಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮೇ 17 ರ ನಂತರ ಕೆಲವು ಕಾರ್ಯಗಳನ್ನು ನೆಗೆಟಿವ್ ಪಟ್ಟಿಗೊಳಪಡಿಸಿ ಸಂಪೂರ್ಣ ನಿಯಂತ್ರಿಸಲಾಗುವುದು. ಜೊತೆಗೇ ಹೆಚ್ಚಿನ ಆರ್ಥಿಕ ಚಟುವಟಿಕೆಗಳಿಗೆ ಕೇಂದ್ರ ಸರಕಾರ ಅನುಮತಿ ನೀಡಲಿದೆ.
ದೇಶದ ವಿತರಣಾ ಸಂಪ್ರದಾಯವನ್ನು ಸಂಪೂರ್ಣ ತೆರೆಯಲಾಗುವುದು. ಆದರೆ ಶಾರೀರಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇತರ ಸುರಕ್ಷಾ ವ್ಯವಸ್ಥೆಗಳನ್ನು ಪಾಲಿಸಬೇಕು. ಸಣ್ಣ ಉದ್ಯಮದಲ್ಲಿ ಕೆಲವು ವಿನಾಯಿತಿ, ಸಡಿಲಿಕೆಗಳಿರಲಿವೆ. ಈ ಉದ್ಯಮಕ್ಕೆ ಈಗ ಅನುಮತಿ ಇದ್ದರೂ ಸಂಪೂರ್ಣ ಅದು ಕಾರ್ಯ ಆರಂಭಿಸಿಲ್ಲ . ಇದನ್ನು ಪುನಃ ಸರಿಯಾಗಿ ಕಾರ್ಯ ಆರಂಭಗೊಳ್ಳುವಂತೆ ಮಾಡಲು ಲಾಕ್ಡೌನ್ ಬಳಿಕ ಕ್ರಮ ಕೈಗೊಳ್ಳಲಾಗುವುದು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












