ಲಾಕ್‌ಡೌನ್ ಉಲ್ಲಂಘಿಸುತ್ತಿರುವ ಯುವಕರ ಕುರಿತು ಪಂಜಾಬ್ ಮುಖ್ಯಮಂತ್ರಿಗೆ ದೂರು ನೀಡಿದ 5 ವರ್ಷದ ಬಾಲಕಿ- ವೀಡಿಯೊ ವೈರಲ್

0
553

ಸನ್ಮಾರ್ಗ ವಾರ್ತೆ

ಚಂಡೀಗಢ,ಮೇ.9: ಸಾಮಾಜಿಕ ಅಂತರವನ್ನು ಪಾಲಿಸುವ ಸರಕಾರದ ಸೂಚನೆಯನ್ನು ತನ್ನದೇ ರೀತಿಯಲ್ಲಿ ಪ್ರಚಾರ ಮಾಡುತ್ತಿರುವ ಐದು ವರ್ಷದ ಬಾಲಕಿಯ ವಿಡಿಯೋ ಟಿಕ್ ಟಾಕ್‌ನಲ್ಲಿ ವೈರಲ್ ಆಗಿದೆ.

ಮೊಗಾದ ಐದು ವರ್ಷದ ಬಾಲಕಿ ನೂರ್‌ಪ್ರೀತ್ ಕೌರ್ ಸಾಮಾಜಿಕ ಅಂತರವನ್ನು ಪಾಲಿಸಿ ಎಂಬ ಸಂದೇಶವನ್ನು ಪೋಸ್ಟ್ ಮಾಡಿದ್ದು ಟಿಕ್‍ಟಾಕ್ ವೀಡಿಯೊ ತಾರೆಯಾಗಿ ಬಿಟ್ಟಿದ್ದಾಳೆ. ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್‍ರೊಂದಿಗೆ ನೂರ್‌ಪ್ರೀತ್ ಕೌರ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾಳೆ.

ವೀಡಿಯೊದಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್‍ರಿಗೆ ಫೋನ್ ಕರೆ ಮಾಡಿ ನೂರ್‌ಪ್ರೀತ್ ಕೌರ್ ದೂರು ನೀಡುವುದು ಕಾಣಿಸುತ್ತದೆ. ಕ್ರಿಕೆಟ್ ಆಡಲು ಹೋಗುತ್ತಿರುವ ಹುಡುಗರೊಂದಿಗೆ ಮನೆಯಲ್ಲಿಯೇ ಕುಳಿತುಕೊಳ್ಳಲು ಹೇಳಿದರೂ ಅವರು ಕೇಳುತ್ತಿಲ್ಲ ಎಂದು ಮುಖ್ಯಮಂತ್ರಿಗೆ ಕೌರ್ ಹೇಳುತ್ತಾಳೆ. ಲಾಕ್ ಡೌನ್ ಸೂಚನೆಗಳನ್ನು ಪಾಲಿಸಿ ಮನೆಯಲ್ಲಿ ಕುಳಿತುಕೊಳ್ಳಬೇಕೆಂದು ಮುಖ್ಯಮಂತ್ರಿ ಹುಡುಗರಿಗೆ ಹೇಳುತ್ತಿರುವುದು ಕೂಡ ವೀಡಿಯೋದಲ್ಲಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಭಾರತ ಯುವ ಕಾಂಗ್ರೆಸ್‍ನ್ ಅಧಿಕೃತ ಟ್ವಿಟರ್ ಪುಟದಲ್ಲಿ ವೀಡಿಯೊ ಶೇರ್ ಮಾಡಲಾಗಿದೆ.

ಲಾಕ್‍ಡೌನ್‍ನಲ್ಲಿ ಸಡಿಲಿಕೆ ನೀಡಿದ್ದು, ಅತ್ಯಗತ್ಯ ವಿಷಯಗಳಲ್ಲಿ ಮಾತ್ರ ಹೊರಗೆ ಬರಬಹುದು ಎನ್ನುವುದಕ್ಕಾಗಿದ್ದು ಮನರಂಜನೆಯ ಸಮಯ ಇದಲ್ಲ ಎಂದು ಪುಟ್ಟ ಮಕ್ಕಳಿಗೂ ಅರ್ಥವಾಗಿದೆ. ಆದ್ದರಿಂದ ಅತ್ಯಗತ್ಯಗಳಿಗೆ ಮಾತ್ರ ಹೊರಗೆ ಹೋಗಬಹುದು. ಈ ಹಿಂದೆ ಮೊಗಾ ಪೊಲೀಸರು ಹೊರ ತಂದ ವೀಡಿಯೊವೊಂದರಲ್ಲಿ ನೂರ್‌ಪ್ರೀತ್ ಕೌರ್ ಇದ್ದಳು ನೂರ್ ಪ್ರೀತ್ ಕೌರ್ ತಂದೆ ಸತ್ನಾಂ ಸಿಂಗ್ ಇಟ್ಟಿಗೆ ನಿರ್ಮಾಣ ಕಾರ್ಮಿಕರಾಗಿದ್ದಾರೆ.