ಭಾರತೀಯ ಶೆಫ್‍ರನ್ನು ಮದುವೆಯಾದ ಆಸ್ಟ್ರೇಲಿಯನ್ ರಾಜಕುಮಾರಿ ನಿಧನ

0
762

ಸನ್ಮಾರ್ಗ ವಾರ್ತೆ

ಮೆಲ್ಬರ್ನ್,ಮೇ 15: ಭಾರತೀಯ ಶೇಫ್‍ರನ್ನು ಮದುವೆಯಾಗಿದ್ದ ಆಸ್ಟ್ರೇಲಿಯದ ರಾಜಕುಮಾರಿ ಮಾರಿಯಾ ಗಾಲಿಟ್ಸಿನ್ ನಿಧನರಾಗಿದ್ದು ಅವರಿಗೆ 31ವರ್ಷ ವಯಸ್ಸಾಗಿತ್ತು. ಕಾರ್ಡಿಯಕ್ ಅನೂರಿಸಂನಿಂದ ಮೇ 4 ರಂದು ಅವರು ಹ್ಯೂಸ್ಟನ್‍ನಲ್ಲಿ ನಿಧನರಾಗಿದ್ದಾರೆ. ಅವರಿಗೆ 31 ವರ್ಷ ವಯಸ್ಸಾಗಿತ್ತು.

ಪತಿ ರಿಶಿ ರೂಪ್ ಸಿಂಗ್‍ರ ಜೊತೆ ಹ್ಯೂಸ್ಟನಲ್ಲಿ ವಾಸವಾಗಿದ್ದರು. 2017ರಲ್ಲಿ ಇಬ್ಬರು ಮದುವೆಯಾಗಿದ್ದು ಎರಡು ವರ್ಷದ ಮಗನಿದ್ದಾನೆ. ಮಾರಿಯ ಹ್ಯೂಸ್ಟನ್‍ನಲ್ಲಿ ಇಂಟರಿಯರ್ ಡಿಸೈನರ್ ಆಗಿ ಕೆಲಸದಲ್ಲಿದ್ದರು.

ರಾಜಕುಟುಂಬದ ಮಾರಿಯ ಅನ್ನ-ಪಿಯೇಟರ್ ಗಾಲಿಟ್ಸಿನ್ ದಂಪತಿಯ ಪುತ್ರಿಯಾಗಿದ್ದಾರೆ. 1988ರಲ್ಲಿ ಲಕ್ಸಂಬರ್ಗ್‌ನಲ್ಲಿ ರಾಜಕುಮಾರಿ ಜನಿಸಿದ್ದರು. ಮಾರಿಯರಿಗೆ ಐದು ವರ್ಷವಾಗಿದ್ದಾಗ ಕುಟುಂಬ ರಷ್ಯಾಕ್ಕೆ ವಲಸೆ ಹೋಗಿತ್ತು.