ಸನ್ಮಾರ್ಗ ವಾರ್ತೆ
ಬೆಂಗಳೂರು,ಮೇ.27: ರಾಜ್ಯದ ಆರಾಧಾನಾಲಯಗಳು ಜೂನ್ ಒಂದರಿಂದ ತೆರೆಯಲು ಕರ್ನಾಟಕ ಸರಕಾರ ಸಜ್ಜಾಗಿದೆ. ಮಂದಿರ, ಮಸೀದಿ ಚರ್ಚ್ಗಳನ್ನು ತೆರೆಯಲು ಅನುಮತಿ ನೀಡಬೇಕೆಂದು ಆಗ್ರಹಿಸಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದೇನೆಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ತೆರೆಯಲು ಬಹಳಷ್ಟು ಅನುಮತಿಗಳು ಬೇಕು. ಆದ್ದರಿಂದ ಅದನ್ನು ಕಾದು ನೋಡೋಣ, ಅನುಮತಿ ಲಭಿಸಿದರೆ ಆರಾಧಾನಾಲಯಗಳು ಜೂನ್ ಒಂದರಿಂದ ತೆರೆಯಲಿದೆ ಎಂದು ಯಡಿಯೂರಪ್ಪ ಹೇಳಿದರು.
ರಾಜ್ಯದಲ್ಲಿ ಆರಾಧಾನಾಲಯಗಳು ಜೂನ್ ಒಂದರಿಂದ ತೆರೆಯುವ ಬಗ್ಗೆ ಮೊದಲೇ ಸಚಿವ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದ್ದರು. ಸಾಮಾಜಿಕ ಅಂತರ ಖಚಿತಪಡಿಸುವುದು ಮತ್ತು ಶುಚಿತ್ವಕ್ಕೆ ಪ್ರಾಮುಖ್ಯತೆ ಕಲ್ಪಿಸಿ ಆರಾಧನೆ ಮಾಡಲು ಅವಕಾಶ ನೀಡಲಾಗುವುದು. ದೇಶದಲ್ಲಿ ಮಾರ್ಚ್ 22ರಿಂದ ಸಂಪೂರ್ಣ ಲಾಕ್ಡೌನ್ ಘೋಷಣೆಯ ನಂತರ ಆರಾಧಾನಾಲಯಗಳನ್ನು ಮುಚ್ಚಲಾಗಿತ್ತು.












