ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಮೇ.27: ಏಡ್ಸ್ ರೋಗಗ್ರಸ್ತನಾದ 34 ವರ್ಷದ ಯುವಕ ಆರು ದಿವಸಗಳ ಚಿಕಿತ್ಸೆಯಿಂದ ಕೊರೋನಾದಿಂದ ಮುಕ್ತನಾಗಿದ್ದಾನೆ. ಕಿಂಗ್ ಜಾರ್ಜ್ಸ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಈತ ಚಿಕಿತ್ಸೆ ಪಡೆಯುತ್ತಿದ್ದು, ಸೋಮವಾರ ಡಿಸ್ಚಾರ್ಜ್ ಮಾಡಲಾಗಿದೆ. ಈತನಿಗೆ ಈಗ 14 ದಿನಗಳ ಮನೆಯಲ್ಲಿಯೇ ನಿರೀಕ್ಷಣೆಯನ್ನು ಆದೇಶಿಸಿದ್ದು, ನಂತರ ಆಸ್ಪತ್ರೆಗೆ ಬರಲು ತಿಳಿಸಲಾಗಿದೆ.
ಹೊಸದಿಲ್ಲಿಯಿಂದ ತನ್ನ ಊರಿಗೆ ತೆರಳುವಾಗ ರಸ್ತೆ ಅಪಘಾತದಿಂದ ತಲೆಗೆ ಗಂಭೀರವಾಗಿ ಗಾಯವಾಗಿತ್ತು. ನಂತರ ಆತನ ಪರೀಕ್ಷೆ ನಡೆಸಿದಾಗ ಕೊರೋನ ದೃಢಪಟ್ಟಿದೆ. ಏಡ್ಸ್ಗೆ ಈತ ಮದ್ದು ಸೇವಿಸುತ್ತಿದ್ದ. ಏಡ್ಸ್ ಪೀಡಿತ ವ್ಯಕ್ತಿ ಆರು ದಿನಗಳಲ್ಲಿ ಕೊರೊನಾದಿಂದ ಮುಕ್ತಿ ಹೊಂದಿದ್ದು ತಮ್ಮ ಸರ್ವಿಸ್ನಲ್ಲಿ ಇದು ಮೊದಲ ಪ್ರಕರಣವಾಗಿದೆ ಎಂದು ವೈದ್ಯರು ಹೇಳಿದ್ದಾರೆ.












