ಸೌದಿಯಲ್ಲಿ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ

0
1011

ಸನ್ಮಾರ್ಗ ವಾರ್ತೆ

ರಿಯಾದ್,ಮೇ.29: ಸೌದಿ ಅರೇಬಿಯಾದಲ್ಲಿ ಕೊರೋನ ಪೀಡಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಗುರುವಾರ 1644 ಮಂದಿಯಲ್ಲಿ ಮಾತ್ರ ಸೋಂಕು ಕಂಡು ಬಂದಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಇದು ಕಡಿಮೆ ಸಂಖ್ಯೆಯಾಗಿದೆ. ರೋಗದಿಂದ ಗುಣಮುಖರಾಗುವವರ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 3531ಮಂದಿ ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇದುವರೆಗೆ ಇಲ್ಲಿ 80185 ಮಂದಿಗೆ ಕೊರೋನಾ ಬಾಧಿಸಿತ್ತು. ಇವರಲ್ಲಿ 54553 ಮಂದಿ ರೋಗದಿಂದ ಗುಣಮುಖಹೊಂದಿದ್ದಾರೆ. 25,191 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ 24 ಗಂಟೆಗಳಲ್ಲಿ ಕೊರೋನಕ್ಕೆ 16ಮಂದಿ ಬಲಿಯಾಗಿದ್ದು, ಸೌದಿಯಲ್ಲಿ ಒಟ್ಟು 441 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ರೋಗಿಗಳನ್ನು ಹುಡುಕುವ ಆರೋಗ್ಯ ಕಾರ್ಯಕರ್ತರ ಫೀಲ್ಡ್ ಸರ್ವೆ 39ನೆ ದಿವಸಕ್ಕೆ ತಲುಪಿದೆ. ಮನೆಗಳಿಗೆ, ಇತರೆ ವಾಸಸ್ಥಳಗಳಿಗೆ ವೃದ್ಯಕೀಯ ತಂಡ ತೆರಳಿ ಕೊರೋನಾ ತಪಾಸಣೆ ಮಾಡುತ್ತಿದೆ. ಜೂನ್ ಒಂದರಿಂದ ಮೊಬೈಲ್ ಲ್ಯಾಬ್, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊರೋನ ಪರೀಕ್ಷೆ ನಡೆಯಲಿದೆ.