ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಮೇ.29: ಭಾರತ-ಚೀನದ ಪರಸ್ಪರ ಗಡಿವಿವಾದದ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿಯೊಂದಿಗೆ ಚರ್ಚಿಸಿದ್ದೇನೆ ಮತ್ತು ಅವರು ಒಳ್ಳೆಯ ಮಾನಸಿಕ ಸ್ಥಿತಿಯಲ್ಲಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು, ಟ್ರಂಪ್ ವಾದವನ್ನು ಭಾರತ ಅಲ್ಲಗಳೆದಿದೆ.
ಇತ್ತಲಾಗಿ, ಎರಡು ನಾಯಕರ ನಡುವೆ ಇಂತಹದೊಂದು ಮಾತುಕತೆಯೇ ನಡೆದಿಲ್ಲ ಎಂದು ಸರಕಾರಕ್ಕೆ ಸಂಬಂಧಪಟ್ಟ ಮೂಲಗಳು ತಿಳಿಸಿದೆ. ಹೈಡ್ರಾಕ್ಸಿಕ್ಲೊರೋಕ್ಲಿನ್ ರಫ್ತು ಸಂಬಂಧಿಸಿ ಈ ವರ್ಷ ಎಪ್ರಿಲ್ ನಾಲ್ಕಕ್ಕೆ ಕೊನೆಯದಾಗಿ ಮೋದಿ-ಟ್ರಂಪ್ ನಡುವೆ ಮಾತುಕತೆ ನಡೆದಿದೆ.
ಭಾರತ-ಚೀನಾ ಗಡಿಯ ವಿಷಯದಲ್ಲಿ ಭಾರತದ ನಿಲುವನ್ನು ಅಮೆರಿಕಕ್ಕೆ ತಿಳಿಸಲಾಗಿದೆ. ಸಮಸ್ಯೆ ಪರಿಹರಿಸಲು ಮಧ್ಯಸ್ಥಿಕೆ ವಹಿಸುವುದಾಗಿ ಟ್ರಂಪ್ ಮಾತು ಕೊಟ್ಟಿದ್ದರು. ಆದರೆ, ಸಮಸ್ಯೆಯನ್ನು ಆಂತರಿಕ ಮಟ್ಟದಲ್ಲಿ ಪರಿಹರಿಸುವ ನಿಲುವನ್ನು ಭಾರತ ಹೊಂದಿದೆ ಎಂದು ಮೂಲಗಳು ಹೇಳಿವೆ.
ವೈಟ್ಹೌಸ್ನಲ್ಲಿ ಇದಕ್ಕೆ ಸಂಬಂಧಿಸಿ ಪತ್ರಕರ್ತರು ಪ್ರಶ್ನಿಸಿದಾಗ ಟ್ರಂಪ್ ಮೋದಿ ಒಳ್ಳೆಯ ಮೂಡಿನಲ್ಲಿಲ್ಲ ಎಂದು ಹೇಳಿದ್ದರು. ಅಮೆರಿಕದ ಮಾಧ್ಯಮಗಳಿಗಿಂತ ಭಾರತೀಯರು ನನ್ನನ್ನುಹೆಚ್ಚು ಇಷ್ಟಪಡುತ್ತಾರೆಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರು. ಮೋದಿಯನ್ನು ನಾನು ಇಷ್ಟಪಡುತ್ತೇನೆ. ನಿಮ್ಮ ಪ್ರಧಾನಿ ಒಳ್ಳೆಯ ಮನುಷ್ಯ. ಭಾರತ, ಚೀನಾ ದೊಡ್ಡ ಘರ್ಷಣೆಯ ಹಂತದಲ್ಲಿದೆ. ಎರಡು ದೇಶಗಳಲ್ಲಿ ದೊಡ್ಡ ಸೈನಿಕ ಶಕ್ತಿ ಇದೆ. ಎರಡು ದೇಶಗಳೂ ಅಸ್ವಸ್ಥವಾಗಿದೆ ಎಂದು ಟ್ರಂಪ್ ಹೇಳಿದ್ದರು.
“ನಾನು ಮೋದಿಯೊಂದಿಗೆ ಮಾತಾಡಿದೆ. ಚೀನದೊಂದಿಗಿನ ಸಂಘರ್ಷದಿಂದ ಈಗ ಅವರು ಅಸ್ವಸ್ಥರಾಗಿದ್ದು ಸಮಸ್ಯೆ ಪರಿಹರಿಸಲು ಮಧ್ಯಸ್ಥಿಕೆ ತಾನು ಸಿದ್ಧ ಎಂದು” ಟ್ರಂಪ್ ಹೇಳಿದರು.
ಆದರೆ ಸಮಸ್ಯೆ, ಪರಿಹಾರಕ್ಕೆ ಚೀನದ ವಿದೇಶ ಸಚಿವಾಲಯವನ್ನು ಸಂಪರ್ಕಿಸಿದ್ದೇವೆ ಎಂದು ಟ್ರಂಪ್ಗೆ ವಿದೇಶ ಸಚಿವಾಲಯ ವಕ್ತಾರ ಅನುರಾಗ್ ಶ್ರೀವಾಸ್ತವ ಉತ್ತರ ನೀಡಿದ್ದಾರೆ. ಇದೇವೇಳೆ, ಸಮಸ್ಯೆ ಪರಿಹಾರಕ್ಕೆ ಅಮೆರಿಕ ಅಧ್ಯಕ್ಷರ ಸಹಾಯ ಬೇಡ ಎಂಬ ನಿಲುವನ್ನು ಚೀನ ಹೊಂದಿದೆ. ಈ ಹಿಂದೆ ಕಾಶ್ಮೀರ ವಿಷಯದಲ್ಲಿ ಭಾರತ-ಪಾಕಿಸ್ತಾನ ನಡುವಿನ ಸಮಸ್ಯೆ ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸಲು ತಾನು ಸಿದ್ಧ ಎಂದು ಟ್ರಂಪ್ ಹೇಳಿದ್ದರು.
ಓದುಗರೇ ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












