ಸನ್ಮಾರ್ಗ ವಾರ್ತೆ
ಮುಂಬೈ,ಜೂ.3: ಮಹಾರಾಷ್ಟ್ರದ ಉತ್ತರ ಕರಾವಳಿಯಲ್ಲಿ ನಿಸರ್ಗ ಚಂಡಮಾರುತ ತೀವ್ರಗೊಳ್ಳುತ್ತಿದ್ದು ಗಾಳಿ ಗಂಟೆಗೆ 75-80 ಕಿ.ಮೀ ವೇಗದಿಂದ 100-110 ಕಿ.ಮೀ ವೇಗಕ್ಕೇರಿದೆಯೆಂದು ಹವಮಾನ ನಿರೀಕ್ಷಣಾ ಕೇಮದ್ರ ತಿಳಿಸಿದೆ. ಮುಂದಿನ ಹನ್ನೆರಡು ಗಂಟೆಗಳಲ್ಲಿ 120 ಕಿ.ಮೀ ವೇಗವನ್ನು ಅದು ಪಡೆದುಕೊಳ್ಳಬಹುದು ಎಂದು ವರದಿಯಾಗಿದೆ.
ಚಂಡಮಾರುತವು ಮಹಾರಾಷ್ಟ್ರ ಸಮುದ್ರ ತೀರ ಪ್ರದೇಶದಿಂದ 155 ಕಿಲೋ ಮೀಟರ್ ದೂರದಲ್ಲಿದೆ. ಸಂಚರಿಸುವ ವೇಗ ಕಡಿಮೆ ಆಗದಿದ್ದರೆ ಇಂದೇ ನಿಸರ್ಗ ಚಂಡಮಾರುತ ದಡಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರ ಮುನ್ನೆಚ್ಚರಿಕೆಯನ್ನು ನೀಡಿದೆ. ಮಹಾರಾಷ್ಟ್ರ ಗುಜರಾತ್, ಗೋವಾ ಕರವಾಳಿಗಳಲ್ಲಿ ಭಾರೀ ಗಾಳಿ ಮಳೆಯಾಗುತ್ತಿದ್ದು ಮಹಾರಾಷ್ಟ್ರದ ಉತ್ತರಕ್ಕೂ ಗುಜರಾತಿನ ದಕ್ಷಿಣದ ತೀರದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.
ಮುಂಬೈ ನಗರ, ಥಾಣೆ, ಪಾಲ್ಗರ್, ರಾಯಗಡ, ರತ್ನಗಿರಿ, ಸಿಂಧುರ್ದು ಜಿಲ್ಲೆಗಳ ಸಹಿತ ಭಾರೀ ಕಟ್ಟೆಚ್ಚರ ಆದೇಶ ಹೊರಡಿಸಲಾಗಿದೆ. ಅರಬಿ ಕಡಲಿನಲ್ಲಿ ರೂಪುಗೊಂಡ ಅತಿ ತೀವ್ರ ನಿಮ್ನ ಒತ್ತಡವು ಮಂಗಳವಾರ ಮಧ್ಯಾಹ್ನದ ವೇಳೆ ಚಂಡಮಾರುತಕ್ಕೆ ರೂಪಾಂತರವಾಗಿತ್ತು. ಮಹಾರಾಷ್ಟ್ರದ ರಾಯಗಡದ ಸಮೀಪ ಅಲಿಬೊಗ್, ಹರಿಹರೇಶ್ವರ ಮತ್ತು ಕೇಂದ್ರಾಡಳಿತ ಇರುವ ದಾಮನ್ ನಡುವೆ ಚಂಡಮಾರುತ ತೀರಕ್ಕೆ ಅಪ್ಪಳಿಸುವುದೆಂದು ಹೇಳಲಾಗಿದ್ದು,120 ಕಿಲೊಮೀಟರ್ ವೇಗ ಇರಲಿದೆ.
ಸಮುದ್ರ ಬದಿಯ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ 33 ತುಕಡಿಗಳು ಮಹಾರಾಷ್ಟ್ರ, ಗುಜರಾತ್ಗೆ ಬಂದು ಮೊಕ್ಕಾಂ ಹೂಡಿವೆ. ಇವರಲ್ಲಿ 21 ತುಕಡಿಗಳನ್ನು ನಿರ್ದಿಷ್ಟ ಸ್ಥಳಗಳಿಗೆ ನಿಯೋಜಿಸುವ ಕೆಲಸವೂ ಆಗಿದೆ. ಪಂಜಾಬ್ನಿಂದ ಐದು ತುಕಡಿ ಸಹಿತ 17 ವಿಪತ್ತು ನಿರ್ವಹಣಾ ದಳದ ತುಕಡಿಗಳು ಗುಜರಾತಿಗೆ ಬಂದಿವೆ. ಪ್ರತಿಯೊಂದೂ ಯುನಿಟ್ನಲ್ಲಿ ಸುಸಜ್ಜಿತ 45 ಮಂದಿ ಯೋಧರು ಇದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












