ಸನ್ಮಾರ್ಗ ವಾರ್ತೆ
ಮಂಗಳೂರು,ಜೂ.4: ಕಳೆದ ಲಾಕ್ಡೌನ್ ದಿನಗಳಲ್ಲಿ ಭಾರೀ ಮೊತ್ತರ ವಿದ್ಯುತ್ ಬಿಲ್ಲು ಬಂದಿರುವುದಲ್ಲದೇ, ಸರಕಾರದ ವತಿಯಿಂದ ಘೋಷಿತ ಯಾವುದೇ ರೀತಿಯ ರಿಯಾಯಿತಿಗಳನ್ನು ನೀಡಲಾಗಿಲ್ಲವೆಂಬ ಗ್ರಾಹಕರ ಅನೇಕ ದೂರುಗಳ ಮೇರೆಗೆ ವೆಲ್ಪೇರ್ ಪಾರ್ಟಿಯು ಮೇ 13ರ ರಂದು ಮೆಸ್ಕಾಂ ಅಧಿಕಾರಿಗಳಿಗೆ ವಿದ್ಯುತ್ ಬಿಲ್ ಕಡಿತಗೊಳಿಸುವ ಕುರಿತು ಮನವಿ ಸಲ್ಲಿಸಿತ್ತು. ಮನವಿಗೆ ಧನಾತ್ಮಕವಾಗಿ ಸ್ಪಂದಿಸಿದ ಮಂಗಳೂರು ಮೆಸ್ಕಾಂ ಇಲಾಖೆಯ ಸದ್ರಿ ಅಧಿಕಾರಿಗಳನ್ನು ವೆಲ್ಪೇರ್ ಪಾರ್ಟಿ ಜಿಲ್ಲಾಧ್ಯಕ್ಷರಾದ ಸುಲೈಮಾನ್ ಕಲ್ಲರ್ಪೆಯವರು ಅಭಿನಂದಿಸಿದ್ದಾರೆ.
ಇಲಾಖೆಯಿಂದ ನೀಡಲಾದ ಮಾಹಿತಿಗಳನ್ನು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ ಅವರು, “ಮೆಸ್ಕಾಂ ಇಲಾಖೆಯವರು, ನಿಗದಿತ ದರಕ್ಕಿಂತ ಮಿಗಿಲಾದ ಯಾವುದೇ ರೀತಿಯ ಅಧಿಕವಾದ ದರವನ್ನು ಯಾರಿಗೂ ವಿಧಿಸಿರುವುದಿಲ್ಲವೆಂಬ ಸ್ಪಷ್ಟನೆಯನ್ನು ನೀಡಿದ್ದು, ಲಾಕ್-ಡೌನ್ ದಿನಗಳಲ್ಲಿ ಎಲ್ಲರೂ ಮನೆಯಲ್ಲೇ ಉಳಿದಿದ್ದು ಹಾಗೂ ಈ ಬಾರಿಯ ಬೇಸಿಗೆ ಕಾಲದ ವಿಪರೀತ ಸೆಖೆಯ ಕಾರಣ, ಪ್ಯಾನ್, ಎ. ಸಿ. ಬಳಕೆಯನ್ನು ಹೆಚ್ಚು ಮಾಡಿರಬಹುದಾದ್ದರಿಂದಲೇ, ಸಹಜವಾಗಿಯೇ ಪಾವತಿ ಮೊತ್ತ ಅಧಿಕ ಬಂದಿರುವುದಾಗಿದೆಯೆಂದು” ತಿಳಿಸಿದರು.
ಉಳಿದಂತೆ ಸರಕಾರದ ವತಿಯಿಂದ ನೀಡಿರುವ ರಿಯಾಯಿತಿಗಳು ತಾಂತ್ರಿಕ ಕಾರಣದಿಂದ ಅಂದರೆ ತಂತ್ರಾಂಶವನ್ನು ಅಳವಡಿಸುವ ಕಾರ್ಯಗಳನ್ನು ಸಮರ್ಪಕವಾಗಿ ಇನ್ನೂ ನಿರ್ವಹಿಸಲಾಗದ್ದರಿಂದ (ಸಿಸ್ಟಂ ಅಪ್ಡೇಟ್ ಗೊಳ್ಳದಿರುವುದರಿಂದ) ನೀಡಿರುವ ಬಿಲ್ಲುಗಳಲ್ಲಿ ಅಷ್ಟೊಂದು ವಿಷಯಗಳು ಪ್ರಾಯೋಗಿಕವಾಗಿ ಇನ್ನಷ್ಟೇ ಕಾರ್ಯರೂಪಕ್ಕೆ ಬರಬೇಕಾಗಿದೆ ಎಂಬುದಾಗಿ ಸಾರ್ವಜನಿಕ ಮಾಹಿತಿಗಾಗಿ ಅವರು ತಿಳಿಸಿದರು.
ಮುಂದಿನ ದಿನಗಳಲ್ಲಿ ಸರಕಾರದ ಎಲ್ಲಾ ರೀತಿಯ ರಿಯಾಯಿತಿಗಳನ್ನು ಅದರಲ್ಲಿ ಅಳವಡಿಸಿದ ನಂತರ ಒಟ್ಟು ಮೊತ್ತದಲ್ಲಿ ಸಂಭಂಧ ಪಟ್ಟ ವಿನಾಯಿತಿಯನ್ನು ಕೈಗೊಳ್ಳುವುದಾಗಿ ಮೆಸ್ಕಾಂ ಇಲಾಖೆಯವರು ಭರವಸೆ ನೀಡಿದ್ದು, ಈ ಕುರಿತಂತೆ ಸಾರ್ವಜನಿಕರೆಲ್ಲರೂ ಸಕರಿಸುವಂತೆ ಕೋರಿದ್ದಾರೆಂದು ಅವರು ತಿಳಿಸಿದರು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












