ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜೂ.11: ಕೊರೋನಾ ಮಹಾಮಾರಿಯ ಜೊತೆ ಇತರ ಬೇರೆ ಸಮಸ್ಯೆಗಳನ್ನು ಕೂಡ ಭಾರತ ಎದುರಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಒಟ್ಟುಗೂಡಿ ಭಾರತ ಸಮಸ್ಯೆಯನ್ನು ಎದುರಿಸುತ್ತಿದೆ. ದೇಶವನ್ನು ಅದುವೇ ಬಲಪಡಿಸಿತು. ಈ ಹೋರಾಟ ಮುಂಬರುವ ದಿನಗಳನ್ನು ನಿರ್ಣಯಿಸುತ್ತವೆ. ಭಾರತದ ದೃಢತೆ ದೊಡ್ಡ ಶಕ್ತಿಯಾಗಿದೆ ಎಂದು ಅವರು ಬೆಟ್ಟು ಮಾಡಿದರು. ಅವರು ಇಂಡಿಯನ್ ಚೇಂಬರ್ ಆಫ್ ಕಾಮರ್ಸ್(ಐಸಿಸಿ) ಪ್ಲೀನರಿ ಸಮ್ಮೇಳನದಲ್ಲಿ ಮಾತಾಡುತ್ತಿದ್ದರು.
ಇಡೀ ಜಗತ್ತು ಕೊರೋನಾ ವಿರುದ್ಧ ಹೋರಾಡುತ್ತಿದೆ. ಕೊರೋನಾ ವಿರುದ್ಧ ಹೋರಾಟದಲ್ಲಿ ಭಾರತ ಹಿಂದುಳಿದಿಲ್ಲ. ಮಾತ್ರವಲ್ಲ ಇದೊಂದು ಅವಕಾಶವಾಗಿದೆ. ಪ್ರಳಯ, ಚಂಡಮಾರುತ ಇತ್ಯಾದಿ ತೊಂದರೆ, ಭೂಕಂಪಗಳು, ಅಸ್ಸಂ ತೈಲಬಾವಿಗೆ ಬೆಂಕಿಯಂತಹ ಹಲವು ಸಮಸ್ಯೆಗಳನ್ನು ದೇಶ ಎದುರಿಸುತ್ತಿದೆ.
ಹೊಸ ಅವಕಾಶಗಳನ್ನು ಉಪಯೋಗಿಸಿ ನಾವು ಸಾಧನೆ ಮಾಡಬೇಕಾಗಿದೆ. ಸವಾಲುಗಳನ್ನು ಎದುರಿಸಬೇಕಾಗಿದೆ. ಹೊಸ ಕಾಲವನ್ನು ನಿಯಂತ್ರಿಸಬೇಕು. ಸ್ಥಳೀಯ ಹೊಸ ಉತ್ಪಾದನೆಗಳನ್ನು ತರುವತ್ತ ಭಾರತ ಗಮನಹರಿಸಬೇಕೆಂದು ಪ್ರಧಾನಿ ಹೇಳಿದರು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












