ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜೂ.11: ಭಾರತ-ನೇಪಾಳ ಗಡಿಯ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ನೇಪಾಳ ಪ್ರತಿಕ್ರಿಯಿಸಿದ್ದು ನೇಪಾಳದ ವಿರುದ್ಧ ಬೆದರಿಕೆ ಹಾಕಿ ಹೇಳಿಕೆ ನೀಡದಂತೆ ಅವರಿಗೆ ಕೇಂದ್ರ ಸರಕಾರ ತಾಕೀತು ಮಾಡಲಿ ಎಂದು ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಒಲಿ ಹೇಳಿದ್ದಾರೆ.
“ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ನೇಪಾಳದ ಕುರಿತು ಕೆಲವು ವಿಷಯಗಳನ್ನು ಹೇಳಿದ್ದಾರೆ. ಅವರ ಹೇಳಿಕೆ ಉಚಿತವೂ ಅಲ್ಲ. ಕಾನೂನು ಬದ್ಧವೂ ಅಲ್ಲ. ಅವರ ಹೊಣೆಯಲ್ಲಿಲ್ಲದ ವಿಷಯಗಳನ್ನು ಮಾತಾಡಬಾರದೆಂದು ಭಾರತ ಸರಕಾರ ಅವರಿಗೆ ತಾಕೀತು ಮಾಡಬೇಕು. ನೇಪಾಳಕ್ಕೆ ಬೆದರಿಕೆ ಹಾಕುವ ಅವರ ಹೇಳಿಕೆ ಖಂಡನೀಯವಾಗಿದೆ ಎಂಬ ವಿಷಯವನ್ನು ಅವರಿಗೆ ಹೇಳಿಕೊಡಬೇಕು” ಎಂದು ಶರ್ಮ ಹೇಳಿದರು.ನೇಪಾಳ ಪಾರ್ಲಿಮೆಂಟಿನಲ್ಲಿ ಭಾರತ-ನೇಪಾಳ ಗಡಿ ಸಮಸ್ಯೆಗೆ ಸಂಬಂಧಪಟ್ಟು ಅವರು ಮಾತಾಡುತ್ತಿದ್ದರು.
ರಾಷ್ಟ್ರದ ಭೂಪಟ ನಿರ್ಧರಿಸುವಾಗ ಟಿಬೇಟಿನ ವಿಷಯದಲ್ಲಿ ಮಾಡಿದ ತಪ್ಪು ನೇಪಾಳ ಪುನರಾವರ್ತನೆ ಮಾಡಬಾರದೆಂದು ಯೋಗಿ ಆದಿತ್ಯನಾಥ್ ಒಂದು ಸಂದರ್ಶನದಲ್ಲಿ ಹೇಳಿದ್ದರು. ಟಿಬೆಟಿನಲ್ಲಿ ಏನು ಆಗಿದೆ ಎಂದು ಮತ್ತು ಪ್ರತ್ಯಾಘಾತಗಳ ಕುರಿತು ನೇಪಾಳ ಯೋಚಿಸಬೇಕೆಂದು ಅವರು ಹೇಳಿದದ್ದರು ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕವಾಗಿ ಪೌರಾಣಿಕವಾಗಿ ಶತಮಾನಗಳ ಹಿಂದೆ ಭಾರತ ಮತ್ತು ನೇಪಾಳಗಳ ನಡುವೆ ಸಂಬಂಧವಿದೆ. ಒಂದೇ ಆತ್ಮ ಇರುವ ಎರಡು ದೇಶಗಳು ಎಂಬ ವಿಷಯವನ್ನು ನೇಪಾಳ ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಆದಿತ್ಯನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇಂಡೊಟಿಬೆಟ್ ಗಡಿಯಿಂದ ಲಿಪುಲೇಖಿಗೆ ಭಾರತ ಎಂಬತ್ತು ಕಿಲೊ ಮೀಟರ್ ಉದ್ದದ ರಸ್ತೆ ನಿರ್ಮಿಸುವುದರ ವಿರುದ್ಧ ಕಳೆದ ತಿಂಗಳೂ ನೇಪಾಳ ಪ್ರತಿಭಟನೆ ವ್ಯಕ್ತಪಡಿಸಿತ್ತು. ಎರಡು ದೇಶಗಳ ನಡುವೆ ಅಲ್ಲಿಂದ ಸಮಸ್ಯೆ ಹುಟ್ಟಿಕೊಂಡಿದೆ. ಲಿಪುಲೇಖ್ ಪ್ರದೇಶದ ಹಕ್ಕನ್ನು ನೇಪಾಳ ಮಂಡಿಸುತ್ತಿದೆ.
ಒಲಿ ಸರಕಾರ ಲಿಪುಲೇಖ್ ಸಹಿತ ಹೊಸ ದೇಶದ ಭೂಪಟವನ್ನು ಹೊರತಂದಿದೆ. ಈ ಭೂಪಟಕ್ಕೆ ಕಾನೂನು ಸಾಧ್ಯತೆ ನೀಡುವ ಸಂವಿಧಾನ ತಿದ್ದುಪಡಿಗೆ ನೇಪಾಳ ಪಾರ್ಲಿಮೆಂಟ್ ಮತ್ತು ಎಲ್ಲ ರಾಜಕೀಯ ಪಾರ್ಟಿಗಳು ಒಕ್ಕೊರಳಿನಿಂದ ಬೆಂಬಲಿಸಿವೆ. 1960ರಿಂದ ಲಿಪುಲೇಖ್, ಕಾಲಾಪಾನಿ, ಲಿಂಪಿಯಾದುರಗಳಲ್ಲಿ ಭಾರತದ ಸೇನೆ ಇದೆ. ಆದರೆ ಈ ಪ್ರದೇಶ ನೇಪಾಳದ್ದು. ಭಾರತದ ವಾದವನ್ನು ಒಲಿ ಸರಕಾರ ಪ್ರಶ್ನಿಸಿದೆ. ಗಡಿ ವಿವಾದ ಪರಿಹಾರಕ್ಕೆ ಚರ್ಚಿಸುವ ಬಗ್ಗೆ ತನ್ನ ಭರವಸೆಯನ್ನು ಒಲಿ ಪುನರುಚ್ಚರಿಸಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












