ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ- ದ ವೈರ್ ಸಂದರ್ಶನದಲ್ಲಿ ಬಿಜೆಪಿ ಸಂಸದೆ

0
1271

ಸಂದರ್ಶನ: ಅಮಿತ್ ಸಿಂಗ್

ಪ್ರಜಾಪ್ರಭುತ್ವವನ್ನು ಕೆಡಹುವ ಹಾಗೂ ಮೀಸಲಾತಿಗೆ ಅಂತ್ಯ ಹಾಡುವ ತನ್ನ ಪಕ್ಷದ ಅಥವಾ ಸರಕಾರದ ನಡೆಯನ್ನು ನಾನು ವಿರೋಧಿಸುತ್ತೇನೆ ಎಂದು ಉತ್ತರಪ್ರದೇಶದ ಬಿಜೆಪಿಯ ದಲಿತ ಸಾಂಸದೆ ಹೇಳುತ್ತಾರೆ. ಈ ಬಗ್ಗೆ ‘ದ ವೈರ್ ‘ ಗೆ ನೀಡಿದ ಸಂದರ್ಶನ ಇಲ್ಲಿದೆ.

ಉತ್ತರಪ್ರದೇಶದ ಬಹರೈಚ್ ಜಿಲ್ಲೆಯ ಭಾರತೀಯ ಜನತಾ ಪಾರ್ಟಿ ಎಂಪಿ ಸಾವಿತ್ರಿ ಬಾಯಿ ಫುಲೆ ಇತ್ತೀಚೆಗೆ ತನ್ನ ಪಕ್ಷದ ಮೀಸಲಾತಿ ಹಾಗೂ ದಲಿತರ ಮೇಲಿನ ದಾಳಿಯನ್ನು ಖಂಡಿಸಿದರು. ಜೊತೆಗೆ ಅವರು ಜಿನ್ನಾರನ್ನು ಮಹಾಪುರುಷ ಎಂದು ಬಣ್ಣಿಸಿದರು. ಮತ್ತು ಲಕ್ಕ್ನೋದಲ್ಲಿ ಭಾರತೀಯ ಸಂವಿಧಾನ ಉಳಿಸಿ ಎಂಬ ರಾಲಿ ನಡೆಸಿದರು.
ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಜಿನ್ನಾ ಅವರ ಚಿತ್ರಣದ ಬಗ್ಗೆ ಇತ್ತೀಚೆಗೆ ನಡೆದ ವಿವಾದದ ನಂತರ, “ಮುಹಮ್ಮದ್ ಅಲಿ ಜಿನ್ನಾ ಓರ್ವ ಮಹಾಪುರುಷ” (ಮಹಾನ್ ವ್ಯಕ್ತಿ), ಮತ್ತು ಯಾವಾಗಲೂ ಹಾಗೆಯೇ ಇರುವರು. ಅವರು ಭಾರತದ ಸ್ವಾತಂತ್ರ್ಯಕ್ಕೆ ನೀಡಿದ ಕೊಡುಗೆ ಅಪಾರ ಮತ್ತು ಅವರ ಭಾವಚಿತ್ರಕ್ಕೆ ಸೂಕ್ತ ಸ್ಥಳ ಕಲ್ಪಿಸಲೇಬೇಕು ಎಂದರು.
‘ದ ವೈರ್ ‘ ನೊಂದಿಗೆ ಮಾತಾಡುತ್ತಾ ಅವರ ಅಭಿಪ್ರಾಯಗಳು……..

ವೈರ್: ಏಪ್ರಿಲ್ 1 ರಂದು ನಡೆದ ರಾಲಿಯಲ್ಲಿ, ಸಂವಿಧಾನವು ಅಪಾಯದಲ್ಲಿದೆ ಎಂದು ನೀವು ಹೇಳಿದ್ದೀರಿ. ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ನಿಮ್ಮ ಪಕ್ಷ ಅಧಿಕಾರದಲ್ಲಿದೆ, ಸಂವಿಧಾನಕ್ಕೆ ಬರುವ ಬೆದರಿಕೆ ಎಲ್ಲಿಂದ?

ಸಾವಿತ್ರಿ: ರೇಡಿಯೋ, ಪತ್ರಿಕೆಗಳು ಮತ್ತು ದೂರದರ್ಶನ ಮಾಧ್ಯಮದ ಮೂಲಕ ನೀವು ಎಲ್ಲರೂ ಕೇಳಿರಬಹುದು, ಸಂವಿಧಾನವನ್ನು ಬದಲಾಯಿಸಲು ನಾವು ಇಲ್ಲಿದ್ದೇವೆ ಅಥವಾ ಅದನ್ನು ಪರಿಶೀಲಿಸಲಾಗುವುದು ಎಂದು ಹೇಳಲಾಗುತ್ತದೆ ಮತ್ತು ಮೀಸಲಾತಿಗಳನ್ನು ರದ್ದುಗೊಳಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. (ಹಿರಿಯ ಬಿಜೆಪಿ ನಾಯಕ) ಸುಬ್ರಮಣ್ಯನ್ ಸ್ವಾಮಿ ಇತ್ತೀಚೆಗೆ ಸಂವಿಧಾನವನ್ನು ಬದಲಾಯಿಸುವ ಮೂಲಕ ಮೀಸಲಾತಿಯನ್ನು ಅನೂರ್ಜಿತಗೊಳಿಸಲಾಗುವುದು ಎಂಬ ಹೇಳಿಕೆ ನೀಡಿದ್ದಾರೆ. ಇದು ಸಂಭವಿಸಿದರೆ, ಬಹುಜನ್ ಸಮಾಜವು ಅವರ ಎಲ್ಲಾ ಹಕ್ಕುಗಳನ್ನು ಕಳೆದುಕೊಳ್ಳುತ್ತದೆ.
ಇಂದು ಬಹುಜನ್ ಸಮುದಾಯದ ಸದಸ್ಯರು ಪ್ರಧಾನ್ , ಜಿಲ್ಲಾ ಅಧ್ಯಕ್ಷ, ಜಿಲ್ಲಾ ಪಂಚಾಯತ್ ಸದಸ್ಯ, ಶಾಸಕ, ಪ್ರಾಧ್ಯಾಪಕ, ವೈದ್ಯರು, ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಅಥವಾ ಅಧ್ಯಕ್ಷರು, ಈ ಎಲ್ಲ ಹುದ್ದೆಯನ್ನು ಅಲಂಕರಿಸಿದ್ದಾರೆ. ಅದಕ್ಕೆಲ್ಲ ಕಾರಣ ಬಾಬಾ ಸಾಹೇಬರು ಬರೆದಿರುವ ಸಂವಿಧಾನ ಕಾರಣ. ನಾವಷ್ಟೇ ಅಲ್ಲ, ಸರ್ವೋಚ್ಚ ನ್ಯಾಯಾಲಯದ ಕೆಲವು ನ್ಯಾಯಾಧೀಶರು ಕೂಡ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಭಯ ವ್ಯಕ್ತಪಡಿಸಿದ್ದಾರೆ.
ಇಂದು, ಪರಿಶಿಷ್ಟ ಜಾತಿ ಬಾಲಕಿಯರನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗುತ್ತದೆ. ಒಂದು ಬಹೂಜನ್ ಸಮುದಾಯದ ಸದಸ್ಯನು ಕುದುರೆಯ ಮೇಲೆ ಸವಾರಿ ಮಾಡಿದರೆ, ಅವನನ್ನು ಕೆಳಗಿಳಿಸಿ ಗುಂಡಿಕ್ಕಲಾಗುತ್ತದೆ. ಹಳ್ಳಿಗಳಿಗೆ ಬೆಂಕಿ ಹಚ್ಚಲಾಗುತ್ತದೆ. . ಜನಸಮೂಹದ ಹತ್ಯೆಗಳ ಸರಣಿ ನಡೆಯುತ್ತಿದೆ. ಬಾಬಾ ಸಾಹೇಬ್ ರ ಮೂರ್ತಿಗಳನ್ನು ವಾಡಿಕೆಯಂತೆ ಕೆಡವಲಾಗುತ್ತಿದೆ. ಮತ್ತು ಅಪರಾಧಿಗಳನ್ನು ಬಂಧಿಸುವ ಬದಲು, ಅಂತಹ ಘಟನೆಗಳ ವಿರುದ್ಧ ದೂರು ಸಲ್ಲಿಸುವವರನ್ನು ಬಂಧಿಸಲಾಗಿದೆ ಮತ್ತು ಗಂಭೀರ ಆರೋಪಗಳನ್ನು ಹೊರಿಸಲಾಗಿದೆ. ಜಾತಿ, ಧರ್ಮ, ಸಮುದಾಯ ಮತ್ತು ಲಿಂಗ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡುವ ಭಾರತೀಯ ಸಂವಿಧಾನವು ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದಾಗಿದೆ.

ವೈರ್: ಕೇಂದ್ರ ಮತ್ತು ರಾಜ್ಯದಲ್ಲಿ ನಿಮ್ಮದೇ ಪಕ್ಷ ಆಡಳಿತದಲ್ಲಿರುವುದರಿಂದ ನಿಮ್ಮ ಸ್ವಂತ ಪಕ್ಷ ಮತ್ತು ಸರಕಾರದ ವಿರುದ್ಧ ಹೋರಾಟವೆ?

ಲೋಕಸಭೆಯಲ್ಲಿ ನಾನು ಈ ಸಮಸ್ಯೆಯನ್ನು ಎತ್ತಿದೆ. ನಾನು 2014 ರಿಂದ ಸಂಸತ್ತಿನಲ್ಲಿ ಬಹುಜನ್ ಸಮಾಜಕ್ಕೆ ಮಾಡಿದ ಅನ್ಯಾಯವನ್ನು ಹೈಲೈಟ್ ಮಾಡುತ್ತಿದ್ದೇನೆ. ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತದೆ ಇದ್ದರೇ ಸಂಸದೆಯಾಗಿ ಪ್ರಯೋಜನವಾದರೂ ಏನು?
ವೈರ್: ಉತ್ತರ ಪ್ರದೇಶದಲ್ಲಿ , ವಿಪಕ್ಷ (ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿ) ನಿಮ್ಮ ಪಕ್ಷದ ವಿರುದ್ಧ ‘ದೊಡ್ಡ ಒಕ್ಕೂಟ’ವನ್ನು ನಿರ್ಮಿಸುತ್ತಿದೆ. ಅದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಈ ಪ್ರಶ್ನೆಗಳನ್ನು ಆ ಪಕ್ಷಗಳಿಗೆ ಒಡ್ಡಿದಲ್ಲಿ ಉತ್ತಮವಾಗಬಹುದು. ಎಲ್ಲಾ ಪಕ್ಷಗಳು ಬಹುಜನ್ ಸಮಾಜದ ಹಿತಾಸಕ್ತಿಗಳ ಬಗ್ಗೆ ಮಾತನಾಡಬೇಕು. ಭಾರತದ ಎಲ್ಲ ಪಕ್ಷ ಗಳು ಭಾರತದ ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಗೆ ತರಬೇಕೆಂದು ನಾನು ಬಯಸುತ್ತೇನೆ.

ಪ್ರಶ್ನೆ: ನಿಮ್ಮ ಪಕ್ಷದ ಮುಖಂಡರು ಮತ್ತು ಪ್ರಧಾನಿ ಮೋದಿ ಸಂವಿಧಾನವನ್ನು ರಕ್ಷಿಸುವ ಬಗ್ಗೆ ಮಾತನಾಡುತ್ತಿದ್ದರೂ, ಸಂವಿಧಾನವು ಅಪಾಯದಲ್ಲಿದೆ ಎಂದು ನೀವು ಏಕೆ ಭಾವಿಸುತ್ತೀರಿ?

ನಾನು ಮಾತ್ರ ಅಲ್ಲ. ಕೆಲ ನ್ಯಾಯಾಧೀಶರೂ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಇದೆ ಎಂದು ಹೇಳುತ್ತಿದ್ದಾರೆ. ಚುನಾಯಿತರಾದ ನಂತರ ಎಲ್ಲ ನಾಯಕರೂ ಸಂವಿಧಾನವನ್ನು ಅನುಸರಿಸುವ ಪ್ರತಿಜ್ಞೆ ಮಾಡುತ್ತಾರೆ. ಆದರೆ ಅವರು ತಮ್ಮ ವಾಗ್ದಾನದಲ್ಲಿ ವಿಫಲರಾದಾಗ ಅವರನ್ನು ಪ್ರಶ್ನಿಸಲು ಎಲ್ಲರೂ ಸಮರ್ಥರು.
ಪ್ರಶ್ನೆ: ನಾಲ್ಕು ವರ್ಷಗಳಿಂದ ಮೌನವಾಗಿದ್ದ ನೀವು ಚುನಾವಣಾ ವರ್ಷ ಬಿ.ಜೆ.ಪಿ.ಯ ವಿರುದ್ಧ ಮಾತನಾಡುವುದನ್ನು ನಿಮ್ಮ ವಿರೋಧಿಗಳು ಪ್ರಶ್ನಿಸುತ್ತಿದ್ದಾರೆ?
ನನ್ನ ಎದುರಾಳಿಗಳ ಬಗ್ಗೆ ನನಗೆ ಹೆದರಿಕೆ ಇಲ್ಲ. 2012 ರಲ್ಲಿ ನಾನು ಎಂಎಲ್ಎ ಆಗಿದ್ದಾಗ ನಾನು ಅನ್ಯಾಯ ಮತ್ತು ಬಹುಜನ್ ಸಮಾಜದ ಶೋಷಣೆಯ ವಿರುದ್ಧ ಮಾತನಾಡುತ್ತಿದ್ದೆ. ಈಗ ನಾನು ಸಂಸದೆ ಆಗಿದ್ದೇನೆ, ಇದು ನನ್ನ ಧ್ವನಿಯನ್ನು ಹೆಚ್ಚಿಸುತ್ತಿದೆ.