
2016ರಿಂದ ಪ್ರತಿ ಎರಡು ದಿನಕ್ಕೊಂದು ಸಾಮೂಹಿಕ ಅತ್ಯಾಚಾರದಿಂದಾಗಿ ಹರಿಯಾಣವು ಮಹಿಳೆಯರಿಗೆ ಅಸುರಕ್ಷಿತ ಸ್ಥಳವಾಗಿದೆ.
ಅತ್ಯಾಚಾರಗಳ ಸಂಖ್ಯೆ ಒಟ್ಟು 1187 ಎಂದು ದಾಖಲಾಗಿದೆ. ಇದು ದಿನಕ್ಕೆ ಮೂರಕ್ಕಿಂತ ಹೆಚ್ಚು . ಹರಿಯಾಣ ಪೊಲೀಸರಿಂದ ಪಡೆದ ಮಾಹಿತಿಯ ಪ್ರಕಾರ 70 ಸಾಮೂಹಿಕ ಅತ್ಯಾಚಾರಗಳು 31ಮೇ 2018ರ ವರೆಗೆ ದಾಖಲಿಸಲಾಗಿದೆ. ಇದರಲ್ಲಿ 33 ಪ್ರಕರಣಗಳು ತನಿಖೆಗೆ ಒಳಗಾಗಿದ್ದು 18 ಮಂದಿ ವಿಚಾರಣೆಯಲ್ಲಿದ್ದಾರೆ . ಕಳೆದ ವರ್ಷ 176 ಪ್ರಕರಣಗಳು ದಾಖಲಾಗಿವೆ.
ಹರಿಯಾಣ ಏಕೆ ಮಹಿಳೆಯರಿಗೆ ತುಂಬಾ ಅಪಾಯಕಾರಿಯಾಗಿದೆ? ಮತ್ತು ಶ್ರೀಮಂತ ರಾಜ್ಯದಲ್ಲಿ ಮಹಿಳೆಯರ ಮೇಲೆ ಹಿಂಸಾತ್ಮಕ ಅತ್ಯಾಚಾರಗಳು ಏಕೆ ಆಗುತ್ತಿವೆ? ದೇಶದಲ್ಲಿನ ಅಸಮರ್ಪಕ ಲೈಂಗಿಕ ಅನುಪಾತ, ಪಂಚಾಯತ್ ಗಳಲ್ಲಿ ಆಳವಾಗಿ ಬೇರೂರಿರುವ ವ್ಯವಸ್ಥೆಗಳು, ಮರ್ಯಾದಾ ಹತ್ಯೆಗಳ ಹೊರತು ಹರಿಯಾಣ ಯಾವತ್ತೂ ಲಿಂಗ ಸಂವೇದನೆ ಅಥವಾ ಸಮಾನತೆಗೆ ಹೆಸರಾಗಿಲ್ಲ.
ಗ್ರಾಮಗಳು ಮತ್ತು ಜಿಲ್ಲೆಗಳಾದ್ಯಂತ ಅಶ್ಲೀಲತೆಗೆ ಸುಲಭ ಮಾಧ್ಯಮವಾದ ಸ್ಮಾರ್ಟ್ ಫೋನ್ ಗಳನ್ನು ದೊಡ್ಡ ಅಪರಾಧವಾಗಿ ಪರಿಗಣಿಸಲಾಗುತ್ತದೆ.
“ಇಂದು ಮಕ್ಕಳು ತಮ್ಮ ದೂರವಾಣಿಗಳಲ್ಲಿ ತಮಗೆ ಬೇಕಾದುದನ್ನು ನೋಡುತ್ತಾರೆ. ಸಹ ಶಿಕ್ಷಣ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಹೆಣ್ಣು ಮಕ್ಕಳ ಪರಿಚಯ ಸುಲಭವಾಗಿ ಆಗುತ್ತದೆ. ಇದರಿಂದ ಇಂದು ಪ್ರೇಮ ಪ್ರಕರಣಗಳು ವ್ಯಾಪಕವಾಗಿಬಿಟ್ಟಿದೆ ಎನ್ನುವ ಹಕ್ಮುದ್ದೀನ್ ನೆಲೆಸಿರುವ ನೂಹ್ ಜಿಲ್ಲೆಯಲ್ಲಿ 17 ವರ್ಷದ ಬಾಲಕಿ ಎಂಟು ಮಂದಿ ಕುಡುಕ ಪುರುಷರಿಂದ ಅತ್ಯಾಚಾರಕ್ಕೊಳಗಾಗಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಳು.
ರೊಹ್ಟಕ್ ಪೊಲೀಸ್ ಅಧೀಕ್ಷಕ ಜಶಾಂದೀಪ್ ಸಿಂಗ್ ರಾಂಧವ ರ ಪ್ರಕಾರ, “ಸಾಮೂಹಿಕ ಅತ್ಯಾಚಾರಗಳಲ್ಲಿ ಬಲಿಯಾದವರಿಗೆ ಸಾಮಾನ್ಯವಾಗಿ ಆರೋಪಿಗಳಲ್ಲಿ ಒಬ್ಬನ ಪರಿಚಯವಿರುತ್ತದೆ ಮತ್ತು ಅವರು ತಮ್ಮ ಗೆಳೆಯರನ್ನು ಇಂತಹ ನೀಚ ಕೃತ್ಯಕ್ಕೆ ಆಹ್ವಾನಿಸುತ್ತಾರೆ. ಕೆಲವು ಪ್ರಕರಣಗಳಲ್ಲಿ ಪ್ರೇಮ ವೈಫಲ್ಯ, ವಿವಾಹೇತರ ಸಂಬಂಧ, ಲಿವ್ ಇನ್ ಸಂಬಂಧಗಳೂ ಕಾರಣವಾಗಿರುತ್ತವೆ.”
ನಿರುದ್ಯೋಗ + ಆಲ್ಕೋಹಾಲ್ ಇದೊಂದು ವಿಷಕಾರಿ ಮಿಶ್ರಣ. ದಿನವಿಡೀ ಏನನ್ನೂ ಮಾಡದೆ ಮಾದಕ ವ್ಯಸನದತ್ತ ಆಕರ್ಷಿತರಾಗುವ ಇವರು ಉದ್ಯೋಗ ಮಾರುಕಟ್ಟೆಯಲ್ಲಿ ತಮಗಿಂತ ಹೆಚ್ಚು ಸ್ಪರ್ಧಾತ್ಮಕವಾಗಿರುವ ಹೆಣ್ಣು ಮಕ್ಕಳ ಮೇಲೆ ಹಿಂಸಾತ್ಮಕವಾಗಿ ದಾಳಿ ಮಾಡುತ್ತಾರೆ ಎಂಬುದು ಆಲ್ ಇಂಡಿಯಾ ಡೆಮೊಕ್ರಟಿಕ್ ವೆಮೆನ್ಸ್ ಅಸೋಸಿಯೇಷನ್ ನ ಜಗ್ಮತಿ ಸಂಗ್ವಾನ್ ಅವರ ಅಭಿಪ್ರಾಯ.
ಭಾರತದ ಶ್ರೀಮಂತ ರಾಜ್ಯಗಳ ಪೈಕಿ ಒಂದಾದ ಹರಿಯಾಣದಲ್ಲಿ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಮಾಹಿತಿಯ ಪ್ರಕಾರ ನಿರುದ್ಯೋಗ ದರವು ಶೇ. 15.3ರಷ್ಟು ಅಂದರೆ ಹೆಚ್ಚೇ ಆಗಿದೆ. ಜಿಲ್ಲೆಯ ಉದ್ದಗಲಕ್ಕೂ ಯುವಕರ ಗುಂಪುಗಳು ಅಂಗಡಿಗಳ ಹೊರಗಡೆ ಗುಂಪು ಸೇರುತ್ತವೆ. ಮತ್ತು ಬೆಳಿಗ್ಗೆಯೇ ಜೂಜು ಹಾಗೂ ಇಸ್ಪೀಟು ಆಟದಲ್ಲಿ ತೊಡಗಿರುವುದನ್ನು ಕಾಣಬಹುದು. ಎಲ್ಲ ಸಮೆಸ್ಯೆಗಳಿಗೂ ಪೂರಕವೆಂಬಂತೆ ಆಲ್ಕೋಹಾಲ್ ಪ್ರತಿ ಮೂಲೆ ಮೂಲೆಗಳಲ್ಲೂ ಅಗ್ಗವಾಗಿ ಲಭ್ಯವಿದೆ. ಒಂದು ಗ್ರಾಮದಲ್ಲಿ ಮೆಡಿಕಲ್ ಇಲ್ಲದಿದ್ದರೂ ಮದ್ಯ ಮಾರಾಟದ ಅಂಗಡಿ ಎಲ್ಲ ಗ್ರಾಮದಲ್ಲೂ ಇದೆ. ವರದಿಗಳ ಪ್ರಕಾರ ರೊಹ್ಟಕ್ ನಲ್ಲಿ ಸ್ಟೇಟ್ ಡ್ರಗ್ ಡೆಪೆಂಡೆನ್ಸ್ ಟ್ರೀಟ್ಮೆಂಟ್ ಸೆಂಟರಿಗೆ ಭೇಟಿ ನೀಡಿದ ವ್ಯಸನಿಗಳ ಸಂಖ್ಯೆ 2010 ರಲ್ಲಿ 774 ಇದ್ದದ್ದು 2016 ರಲ್ಲಿ ಏರಿಕೆಯಾಗಿ 3,707 ಕ್ಕೆ ತಲುಪಿದೆ.
.2011 ರ ಜನಗಣತಿಯ ಅಂಕಿ ಅಂಶಗಳ ಪ್ರಕಾರ, ಹರಿಯಾಣದಲ್ಲಿ ಹೆಣ್ಣು ಮಗುವಿನ ಲಿಂಗ ಅನುಪಾತವು 1,000 ಹುಡುಗರಿಗೆ 834 ಹುಡುಗಿಯರು ಮತ್ತು ಒಟ್ಟಾರೆ ಲಿಂಗ ಅನುಪಾತವು 879 ಆಗಿತ್ತು. ಇದು ರಾಜ್ಯದಲ್ಲಿ ಬೃಹತ್ ವಧು ಕೊರತೆಗೆ ಕಾರಣವಾಗಿದೆ. ಇದರಿಂದಾಗಿ ಹರಿಯಾಣದಲ್ಲಿ ಮದುವೆ ಮಾರುಕಟ್ಟೆಯು ಅಸಮತೋಲನಗೊಂಡಿದೆ ಎಂದು ರಾಜಸ್ತಾನ್ ಟೊಂಕ್ ಜಿಲ್ಲೆಯ ಬಾಣಸ್ತಾಲಿ ಯೂನಿವರ್ಸಿಟಿಯಾ ಪ್ರೊಫೆಸರ್ ಪಾರೋ ಮಿಶ್ರ ಅವರ ಪ್ರತಿಕ್ರಿಯೆ.
ರಾಜ್ಯದ ಸರ್ಕಾರ, ಕನಿಷ್ಠ ಪಕ್ಷ ರಾಜ್ಯವನ್ನು ಸುರಕ್ಷಿತವಾಗಿಡಲು ಅನೇಕ ಪ್ರಯತ್ನಗಳನ್ನು ಮಾಡಿದೆ. ಹರಿಯಾಣವು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಭೇಟಿ ಬಚಾವೊ ಬೇಟಿ ಪಡಾವೋ ಯೋಜನೆಯ ಯೋಜನಾ ಕೇಂದ್ರವಾಗಿತ್ತು; ಇದು 2015 ರಲ್ಲಿ ‘ಆಪರೇಷನ್ ದುರ್ಗಾ’ವನ್ನು ಪ್ರಾರಂಭಿಸಿತು, ಅದರದೇ ಆದ ಉತ್ತರ ಪ್ರದೇಶದ ರೋಮಿಯೋ-ವಿರೋಧಿ ತಂಡಗಳು, ಮತ್ತು ಪ್ರತಿ ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಗಳನ್ನು ತೆರೆದಿದೆ. ರಾಜ್ಯ ಶೀಘ್ರದಲ್ಲೇ ಲಿಂಗ ಅಪರಾಧಗಳನ್ನು ಪರಿಹರಿಸುವ ಒಂದು ರಾಜ್ಯ ಕಾರ್ಯ ಯೋಜನೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ,











