ಸನ್ಮಾರ್ಗ ವಾರ್ತೆ
ವಾಷಿಂಗ್ಟನ್,ಜೂ.13: ಕೊರೋನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಎಚ್-1ಬಿ ವೀಸಾ ಸಹಿತ ಇರುವ ಕಾರ್ಮಿಕ ವೀಸಾಗಳನ್ನು ನಿಲ್ಲಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಐಟಿ ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವ ಸಾವಿರಾರು ಭಾರತೀಯರೂ ಸೇರಿ ಇದು ಭಾಧಕವೆನಿಸಿಕೊಳ್ಳಲಿದೆ ಎಂದು ವರದಿಯು ತಿಳಿಸಿದೆ. ವೀಸಾ ಅಮಾನತು ಮಾಡುವುದಾದರೆ ಹಲವು ಮಂದಿ ಕೆಲಸ ಕಳಕೊಳ್ಳುವರು.
ಕೊರೋನ ಹರಡಿದ್ದರಿಂದ ಅಮೆರಿಕದಲ್ಲಿ ನಿರುದ್ಯೋಗಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದ್ದು, ನಿರುದ್ಯೋಗಿಗಳು ಟ್ರಂಪ್ ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದು ಅಧ್ಯಕ್ಷೀಯ ಕಾಲ ಕೂಡ ಆಗಿರುವುದರಿಂದ ಟ್ರಂಪ್ಗೆ ಭಾರೀ ತಲೆನೋವನ್ನು ಸೃಷ್ಟಿಸಿದ್ದು, ನಿರುದ್ಯೋಗಿಗಳ ಒಕ್ಕೂಟ ಸರಕಾರವನ್ನು ವಿರೋಧಿಸುತ್ತಿದೆ. ಅಧ್ಯಕ್ಷೀಯ ಚುನಾವಣೆಯನ್ನು ಎದುರು ನೋಡುತ್ತಿರುವ ಟ್ರಂಪ್ ಎಚ್-1ಬಿ ವೀಸಾಗಳನ್ನೇ ನಿಲ್ಲಿಸ ಹೊರಟಿದ್ದಾರೆ. ಅಕ್ಟೋಬರ್ ಒಂದಕ್ಕೆ ಅಮೆರಿಕದಲ್ಲಿ ಹೊಸ ಆರ್ಥಿಕ ವರ್ಷ ಆರಂಭವಾಗುತ್ತಿದ್ದು, ಹೊಸ ವೀಸಾಗಳು ಇಶ್ಯೂ ಆಗುವುದು ಶುರುವಾಗುತ್ತದೆ. ಅದಕ್ಕಿಂತ ಮೊದಲು ವೀಸಾ ನವೀಕರಣ ಸ್ಥಗಿತಗೊಳಿಸುವುದು ಟ್ರಂಪ್ರ ಉದ್ದೇಶವಾಗಿದೆ ಎಂದು ವಾಲ್ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಇದು ಜಾರಿಗೊಂಡರೆ ಎಚ್-1ಬಿ ವೀಸಾ ಇರುವ ವಿದೇಶಿಯರ ವೀಸಾ ರದ್ದತಿ ಹಿಂಪಡೆಯದೆ ಅಮೆರಿಕ್ಕೆ ಮರಳಿ ಪ್ರವೇಶಿಸುವಂತಿಲ್ಲ. ಐಟಿ ಕ್ಷೇತ್ರದ ಉದ್ಯೋಗಿಗಳಿಗೆ ಎಚ್-1ಬಿ ವೀಸಾ ನೀಡಲಾಗುತ್ತಿತ್ತು. ಇದು ಭಾರತೀಯರಿಗೆ ಗಣನೀಯವಾಗಿ ಬಾಧಕವೆನಿಸಿಕೊಳ್ಳಲಿದೆ. ಕೊರೋನ ಕಾರಣದಿಂದ ಎಚ್-1ಬಿ ವೀಸಾ ಇರುವ ಹಲವು ಭಾರತೀಯ ಕೆಲಸಗಾರರು ಊರಿಗೆ ಮರಳಬೇಕಾಗಿ ಬಂದಿತ್ತು. ಆದರೂ, ಅಂತಿಮ ತೀರ್ಮಾನ ಪ್ರಕಟಿಸಿಲ್ಲ ಎಂದು ವೈಟ್ ಹೌಸ್ ತಿಳಿಸಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












