ಅಂಬಾನಿಯ ರಿಲಾಯನ್ಸ್ ಇಂಡಸ್ಟ್ರೀಸ್ ಹಿಂದೆಯೂ ಒಬ್ಬ ಮೋದಿ

0
528

ಸನ್ಮಾರ್ಗ ವಾರ್ತೆ

ಬೆಂಗಳೂರು/ಮುಂಬೈ, ಜೂ.13: ಲಾಕ್‍ಡೌನ್ ಕಾಲದಲ್ಲಿಯೂ ಮುಖೇಶ್ ಅಂಬಾನಿಯ ಮಾಲಕತ್ವದ ರಿಲಯನ್ಸ್ ಜಿಯೊಗೆ ಭಾರೀ ಹೂಡಿಕೆ ಬಂದಿದೆ. ಇತರ ಕಂಪೆನಿಗಳು ಕಂಗೆಟ್ಟು ನಿಂತರೂ ಲಾಕ್‍ಡೌನಿನಲ್ಲಿಯೂ ರಿಲಯ್ಸ್ ಕಾರ್ಯಭಾರ ಅಡೆತಡೆಯಿಲ್ಲದೆ ಮುಂದುವರಿಸಿತು. ಇದರ ಹಿಂದೆ ಒಬ್ಬ ಮೋದಿ ಇದ್ದಾರೆ.

ಮನೋಜ್ ಮೋದಿ

ರಿಲಯನ್ಸ್‌ನ ನಿರ್ದೇಶಕರಲ್ಲಿ ಒಬ್ಬರಾದ ಮನೋಜ್ ಮೋದಿ ಕಂಪೆನಿಯ ಬುದ್ಧಿ ಕೇಂದ್ರವಾಗಿದ್ದಾರೆ. ಅವರು ಸಾರ್ವಜನಿಕ ಸ್ಥಳದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ. ಫೇಸ್‍ಬುಕ್‍ನೊಂದಿಗೆ 5.7 ಬಿಲಿಯನ್ ಡಾಲರ್ ಜಿಯೊದ ಒಪ್ಪಂದ ಹಿಂದೆ ಮನೋಜ್ ಮೋದಿ ಇದ್ದಾರೆ. ಅಂಬಾನಿ ಮೋದಿಯ ಜುಗಲ್ ಬಂಧಿ ರಿಲಯನ್ಸ್ ಹಲವು ಒಪ್ಪಂದಗಳ ಹಿಂದಿದೆ ಎಂದು ಕಾರ್ಪೊರೇಟ್ ಜಗತ್ತಿನಲ್ಲಿ ಬಹಿರಂಗಗೊಂಡ ಗುಟ್ಟು ಆಗಿದೆ.

ಒಪ್ಪಂದಕ್ಕೆ ಸಹಿ ಮಾಡುವ ಮೊದಲು ಅದರಲ್ಲಿ ಏನಾದರೂ ತಪ್ಪಾಗಿದೆಯೇ ಎಂದು ಪ್ರತಿಯೊಂದು ಹಂತದಲ್ಲಿ ಪರಿಶೀಲಿಸುವುದು ಮೋದಿ ಹೊಣೆಗಾರಿಕೆಯಾಗಿದೆ. ಮನೋಜ್‍ರ ಈ ಸೂಕ್ಷ್ಮದರ್ಶಿತ್ವ ರಿಲಯನ್ಸ್ ಯಶಸ್ಸಿನ ಹಿಂದಿರುವ ಗುಟ್ಟು .

ರಿಲಯನ್ಸ್‌ನ ಯಾವ ಕಾನ್ಫರೆನ್ಸ್‌ನಲ್ಲಿಯೂ ನಾನು ಎಂದೂ ಇಣುಕು ಹಾಕುವುದಿಲ್ಲ ಎಂದು ಮನೋಜ್ ಮೋದಿ ಹೇಳುತ್ತಾರೆ. ಬಿಸಿನೆಸ್ ಸ್ಟ್ರಾಟಜಿ ಕುರಿತು ತನಗೆ ಸ್ಪಷ್ಟ ಅರಿವಿಲ್ಲ. ತನಗೆ ಸ್ಪಷ್ಟ ದೃಷ್ಟಿಕೋನವೂ ಇಲ್ಲ ಎಂದು ಮನೋಜ್ ಮೋದಿ ಹೇಳುತ್ತಾರೆ. ಕಂಪೆನಿಯ ಉದ್ಯೋಗಿಗಳಿಗೆ ತರಬೇತಿ ಕೊಡುವುದು ಅವರಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸವನ್ನಷ್ಟೇ ನಾನು ಮಾಡುತ್ತೇನೆ ಎಂದು ಅವರು ಹೇಳುತ್ತಾರೆ. ಮುಖೇಶ್ ಅಂಬಾನಿಯ ತಂದೆ ಧೀರೂ ಭಾಯಿ ಅಂಬಾನಿಯ ಪೆಟ್ರೊಕೆಮಿಕಲ್‍ಗೆ ದಾಟಿದ ನಂತರ ಕಂಪೆನಿಯಲ್ಲಿರುವ ಕೆಲವೇ ಕೆಲವು ಜನರಲ್ಲಿ ಒಬ್ಬರು ಮನೋಜ್ ಹರ್ಜೀವನ್‌ದಾಸ್ ಮೋದಿ. ಮುಂಬೈಯ ಯುನಿವರ್ಸಿಟಿ ಡಿಪಾರ್ಟ್‍ಮೆಂಟ್ ಆಫ್ ಕೆಮಿಕಲ್ ಟೆಕ್ನಾಲಜಿಯಲ್ಲಿ ಕಲಿಯುವ ಕಾಲದಿಂದ ಮುಖೇಶ್ ಮತ್ತು ಮನೋಜ್ ಮೋದಿ ಸ್ನೇಹಿತರಾಗಿದ್ದು, ಈ ಸೌಹಾರ್ದ ನಂತರ ರಿಲಯನ್ಸ್ ಇಂಡಸ್ಟ್ರಿಯ ನಂಬಿಗಸ್ಥನನ್ನಾಗಿಸಿತು.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.