ಮಗು ಸತ್ತ ಹಿನ್ನೆಲೆ; ಮಾಟಗಾತಿ ಎಂದು ಆರೋಪಿಸಿ ವಿಧವೆಯ ತಲೆ ಕತ್ತರಿಸಿದ ವ್ಯಕ್ತಿ

0
529

ಸನ್ಮಾರ್ಗ ವಾರ್ತೆ

ಒಡಿಸ್ಸಾ,ಜೂ.16: ಒಡಿಸ್ಸಾದಲ್ಲಿ ದುಷ್ಟ ಮಂತ್ರವಾದಿನಿ ಎಂದು ಆರೋಪಿಸಿ ವಿಧವೆಯ ತಲೆಯನ್ನು ಕತ್ತರಿಸಿ ಅದರೊಂದಿಗೆ ಯುವಕ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಒಡಿಸ್ಸಾದ ಮಯೂರ್ ಗಂಜ್ ಜಿಲ್ಲೆಯ 30 ವರ್ಷದ ಬುದ್ದುರಾಮ ಸಿಂಗ್ ಸಂಬಂಧಿಕರಾದ 60 ವರ್ಷ ಮಹಿಳೆ ಚಂಪಾ ಸಿಂಗ್‍ರ ತಲೆಯನ್ನು ಕತ್ತರಿಸಿದ್ದು, 13 ಕಿಲೋಮೀಟರ್ ದೂರದ ಪೊಲೀಸ್ ಠಾಣೆಗೆ ಅದರೊಂದಿಗೆ ಬಂದು ಶರಣಾಗಿದ್ದಾನೆ. ಮೂರು ದಿವಸ ಮೊದಲು ಬುದ್ಧುರಾಮನ ಮಗು ಮೃತಪಟ್ಟಿತ್ತು. ವಾಮಾಚಾರದಿಂದ ಮಗು ಮೃತಪಟ್ಟಿದೆ ಎಂಬ ಶಂಕೆಯಿಂದ ಚಂಪ ಸಿಂಗ್‍ರ ತಲೆಯನ್ನು ಆತ ಕತ್ತರಿಸಿದ್ದಾನೆಂದು ಹೇಳಲಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.