ಬ್ಯಾಂಕ್ ಬಾಗಿಲಿನ ಗಾಜು ಬಿದ್ದು ಮಹಿಳೆಯ ಸಾವು; ಮಾನವಹಕ್ಕು ಆಯೋಗದಿಂದ ಕೇಸು

0
1203

ಸನ್ಮಾರ್ಗ ವಾರ್ತೆ

ಕೇರಳ,ಜೂ.16: ಪೆರಂಬೂರಿನ ಬ್ಯಾಂಕಿನ ಬಾಗಿಲಿನ ಗಾಜು ಒಡೆದು ಬಿದ್ದ ಕಾರಣದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಘಟನೆಯಲ್ಲಿ ಮಾನವಹಕ್ಕು ಆಯೋಗ ಕೇಸು ದಾಖಲಿಸಿಕೊಂಡಿದೆ. ಎರ್ನಾಕುಳಂ ರೂರಲ್ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಮತ್ತು ಪೆರಂಬವೂರ್ ನಗರಸಭಾ ಕಾರ್ಯದರ್ಶಿ ತನಿಖೆ ಮಾಡಿ ಮೂರು ವಾರಗಳೊಳಗೆ ವರದಿ ನೀಡಲು ಮಾನವಹಕ್ಕು ಆಯೋಗದ ಅಧ್ಯಕ್ಷ ಜಸ್ಟಿಸ್ ಆಂಟನಿ ಡೊಮನಿಕ್ ಆದೇಶಿಸಿದ್ದಾರೆ.

ಪೆರಂಬವೂರಿನ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಕಡಿಮೆ ಗುಣಮಟ್ಟದ ಗಾಜು ಇತ್ತು ಎಂಬ ದೂರು ಇದ್ದು ಕೇಸು ದಾಖಲಿಸಲಾಗಿದೆ. ಪೊಲೀಸರು ಬ್ಯಾಂಕಿನಲ್ಲಿ ಬಂದು ಪರಿಶೀಲನೆಯನ್ನು ಕೂಡ ನಡೆಸಿದರು. ಬ್ಯಾಂಕಿನ ಮುಂಬಾಗಿಲಿನ ಗಾಜು ಒಡೆಯಿತು. ಬೈಜು ಪೋಲ್‍ರ ಪತ್ನಿ ಬೀನಾರ ಹೊಟ್ಟೆಗೆ ತರಚಿ ಅವರು ಮೃತಪಟ್ಟಿದ್ದರು. ಪೆರಂಬಾವೂರ್ ಎಎಂ ರಸ್ತೆಯ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಸೋಮವಾರ ಮಧ್ಯಾಹ್ನ ಘಟನೆ ನಡೆದಿತ್ತು. ಮಹಿಳೆಯನ್ನು ಹತ್ತಿರದಲ್ಲಿದ್ದ ಆಸ್ಪತ್ರೆಗೆ ಕರೆದುಕೊಂಡು ಹೋದರು ಜೀವ ಉಳಿಸಲು ಸಾಧ್ಯವಾಗಿಲ್ಲ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.