ಸನ್ಮಾರ್ಗ ವಾರ್ತೆ
ಪಾಟ್ನ,ಜೂ.16: ಲಾಕ್ಡೌನ್ನಿಂದ ಆದಾಯವಿಲ್ಲದೇ ಕುಟುಂಬ ಹಸಿವಿಗೆ ಬಿದ್ದುನೊಂದಿದ್ದ ಆಟೋ ಚಾಲಕರೊಬ್ಬರು ಪಾಟ್ನದ ಶಾಹಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿನ ಸುದ್ದಿ ಬಹಿರಂಗಗೊಡನೆ ಅಧಿಕಾರಿಗಳು ಕುಟುಂಬಕ್ಕೆ ಆಹಾರ ವಸ್ತುಗಳನ್ನು ತಂದು ಹಾಕಿದ್ದಾರೆ. ಆಟೋ ಚಾಲಕನ ಆದಾಯದಿಂದ ಕುಟುಂಬ ಜೀವನ ನಡೆಸುತ್ತಿತ್ತು. ಕುಟುಂಬ ಹಸಿದಾಗ ಸಹಿಸಲಾಗದೆ ಚಾಲಕ ಆತ್ಮಹತ್ಯೆಗೆ ಶರಣಾದರು. ಪಾಟ್ನ ಶಾಹಪುರದಲ್ಲಿ ಘಟನೆ ನಡೆದೊಡನೆ ಅಧಿಕಾರಿಗಳು ಎಚ್ಚೆತ್ತು ಆಹಾರ ಸಾಮಾನು ಮನೆಗೆ ತಲುಪಿಸಿದರು.
ಕುಟುಂಬದಲ್ಲಿ ಪತ್ನಿ, ತಂದೆ-ತಾಯಿ ಹಾಗೂ ಮೂವರು ಮಕ್ಕಳಿದ್ದಾರೆ. ಬ್ಯಾಂಕ್ ಸಾಲ ಮಾಡಿದ ಆಟೋ ರಿಕ್ಷಾ ಖರೀದಿಸಿದ್ದರು. ಅದರಿಂದ ಬರುವ ಆದಾಯ ಕುಟುಂಬ ಸಾಕುವ ಏಕ ಮಾರ್ಗವಾಗಿತ್ತು. ಮೂರು ತಿಂಗಳಿಂದ ಆಟೋದ ಸಾಲದ ಕಂತು ಕಟ್ಟುವುದಕ್ಕೂ ಆಗಿರಲಿಲ್ಲ. ರೇಷನ್ ಕಾರ್ಡ್ ಇಲ್ಲ. ಆದ್ದರಿಂದ ಉಚಿತ ಪಡಿತರವೂ ಸಿಗುತ್ತಿರಲಿಲ್ಲ.
ಮಕ್ಕಳು ಹಸಿವಿನಿಂದ ಕಂಗಾಲಾದಾಗ ಅವರು ಮಾನಸಿಕವಾಗಿ ಕುಗ್ಗಿಹೋಗಿದ್ದರು. ತದನಂತರ ಆತ್ಮಹತ್ಯೆ ಮಾಡಿಕೊಂಡರೆಂದು ಆಟೊ ಚಾಲಕನ ತಂದೆ ಎನ್ಡಿಟಿವಿಗೆ ಹೇಳಿದ್ದಾರೆ.
ಆತ್ಮಹತ್ಯೆ ನಡೆದ ಬಳಿಕ ಜಿಲ್ಲಾ ಮ್ಯಾಜಿಸ್ಟ್ರೇಟ್ ಕುಮಾರ್ ರವಿ ಸೋಮವಾರ 25 ಕೆಜಿ ಅಕ್ಕಿ ಗೋಧಿಯನ್ನು ಕುಟುಂಬಕ್ಕೆ ತಲುಪಿಸಿದರು. ಆಟೊ ಚಾಲಕನ ಆತ್ಮಹತ್ಯೆ ಬಿಹಾರದ ನಿರುದ್ಯೋಗವನ್ನು ತೆಗೆದು ತೋರಿಸುತ್ತಿದೆ ಎಂದು ಬಿಹಾರ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಹೇಳಿದಾರೆ. ನಿರುದ್ಯೋಗದಂತಹ ಸಮಸ್ಯೆ ಬಗೆಹರಿಸುವಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












