ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜೂ.16: ಪೂರ್ವ ಲಡಾಕ್ನಲ್ಲಿ ಚೀನದಿಂದ ಗುಂಡು ಹಾರಾಟ ನಡೆದಿದ್ದು ಕರ್ನಲ್ ಸಹಿತ ಮೂವರು ಭಾರತದ ಸೈನಿಕರು ಮೃತಪಟ್ಟಿದ್ದಾರೆ. ತದನಂತರ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ತುರ್ತು ಸಭೆ ಕರೆದು ಸೇರಿಸಿದರು. ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಮೂರು ಸೇನೆಯ ಮುಖ್ಯಾಧಿಕಾರಿಗಳು ವಿದೇಶ ಸಚಿವ ಎಸ್.ಜೈಶಂಕರ್ ಸಭೆಯಲ್ಲಿ ಭಾಗವಹಿಸಿದ್ದಾರೆ.
ಕಳೆದ ಕೆಲವು ವಾರಗಳಿಂದ ಲಡಾಕ್ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಇದೆ. ಲಡಾಕ್ನ ಗಾಲ್ವಾನ್ ಕಣಿವೆಯಲ್ಲಿ ನಿನ್ನೆ ರಾತ್ರೆ ಚೀನಾದಿಂದ ದಾಳಿ ನಡೆದಿದೆ. ಇನ್ಫೆಂಟ್ರಿ ಬೆಟಾಲಿಯನ್ನ ಕಮಾಂಡಿಂಗ್ ಆಫಿಸರ್ ಸಂತೋಷ್ ಬಾಬು ಮತ್ತು ಇಬ್ಬರು ಯೋಧರು ಗುಂಡಿಗೆ ಬಲಿಯಾದರು. 1975ರ ನಂತರ ಇದೇ ಮೊದಲ ಬಾರಿ ಭಾರತ-ಚೀನಾ ಘರ್ಷಣೆಯಲ್ಲಿ ಸೈನಿಕರ ಜೀವ ಹಾನಿ ಸಂಭವಿಸಿದೆ. ಸಮಸ್ಯೆ ಪರಿಹಾರಕ್ಕೆ ಎರಡು ದೇಶಗಳ ಸೇನಾಧಿಕಾರಿಗಳ ನಡುವೆ ಚರ್ಚೆ ಆರಂಭವಾಗಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












