ವೃದ್ಧ ತಂದೆಗೆ ಕ್ರೂರವಾಗಿ ಥಳಿಸಿದ ಮದ್ಯಪಾನಿ ಮಗ: ವಿಡಿಯೋ ವೈರಲ್ ಆಗುತಿದ್ದಂತೆ ಆರೋಪಿ ಕಣ್ಮರೆ!

0
939

ಸನ್ಮಾರ್ಗ ವಾರ್ತೆ

ಕೇರಳ,ಜೂ.18: ಮದ್ಯಪಾನ ಮಾಡಿ ಮನೆಗೆ ಬಂದ ಮಗ ವೃದ್ಧೆ ತಂದೆಗೆ ಕ್ರೂರವಾಗಿ ಹೊಡೆಯುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅದರ ಬೆನ್ನಿಗೆ ಮಗನ ವಿರುದ್ಧ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಅನಿಯನ್ ಎಂಬ 57 ವರ್ಷ ಎಬ್ರಾಹಂ ಜೋಸೆಫ್‌ಗೆ ಆತನ ಮಗ ಅನಿಲ್(27) ಹೊಡೆಯುವ ದೃಶ್ಯಗಳು ಬುಧವಾರ ಬೆಳಗಿನಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿದ್ದು, ಆರೋಪಿ ತಲೆ ತಪ್ಪಿಸಿಕೊಂಡಿದ್ದಾನೆ. ಅವನ್ನು ಕೂಡಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಸಂಜೆ ಐದೂವರೆ ಗಂಟೆಗೆ ತಂದೆಗೆ ಅನಿಲ್ ಹೊಡೆದಿದ್ದ. ಸಂಬಂಧಿಕರ ಮನೆಗೆ ತಂದೆ ಹೋಗುವುದನ್ನು ಮಗ ಪ್ರಶ್ನಿಸಿದಾಗ ಜಗಳ ಆರಂಭವಾಗಿತ್ತು. ನಂತರ ಅನಿಲ್ ತಂದೆಯ ಮೇಲೆ ಹಲ್ಲೆ ಮಾಡಿದ್ದ. ಇನ್ನು ಸಂಬಂಧಿಕರ ಮನೆಗೆ ಹೋಗುವುದಿಲ್ಲ ಎಂದು ತಂದೆ ಮಗನ ಕಾಲು ಹಿಡಿದು ಬೇಡಿಕೊಳ್ಳುತ್ತಿರುವ ದೃಶ್ಯವೂ ವೀಡಿಯೊದಲ್ಲಿದೆ. ತಂದೆಯನ್ನು ಅನಿಲ್‌ನಿಂದ ಕಾಪಾಡಲು ನೆರೆಯ ಕೆಲವರು ಯತ್ನಿಸುತ್ತಿದ್ದರು. ನೆರೆಮನೆಯ ಯಾರೋ ಘಟನೆಯನ್ನು ಚಿತ್ರಿಸಿ ಸಾಮಾಜಿಕ ಮಾಧ್ಯಮಕ್ಕೆ ಹಾಕಿದ್ದಾರೆ. ನಂತರ ಅನಿಲ್‍ನನ್ನು ಹುಡುಕಿಕೊಂಡ ತಿರುವಲ್ಲ ಪೊಲೀಸರು ಬಂದಾಗ ಆತ ತಪ್ಪಿಸಿಕೊಂಡ ಎನ್ನಲಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.