ಚೈನೀಸ್ ಫುಡ್ ರೆಸ್ಟೊರೆಂಟ್‍ಗಳನ್ನು ನಿಷೇಧಿಸಬೇಕು- ರಾಮದಾಸ್ ಅಠಾವಳೆ ಕರೆ

0
496

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.18: ಚೈನಿಸ್ ಫುಡ್ ಮಾರಾಟ ಮಾಡುವ ರೆಸ್ಟೊರೆಂಟ್‍ಗಳನ್ನು ನಿಷೇಧಿಸಬೇಕೆಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ. ಸೋಮವಾರ ರಾತ್ರೆ ನಡೆದಿದ್ದ ಚೀನಾ ದಾಳಿಯಲ್ಲಿ ಕರ್ನಲ್ ಸಹಿತ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಆಹಾರ ಸಚಿವ ರಾಮದಾಸ್ ಅಠಾವಳೆ ಚೈನೀಸ್ ಫುಡ್ ಮಾರುವ ಹೊಟೇಲುಗಳನ್ನು ನಿಷೇಧಿಸಲು ಕರೆ ಕೊಟ್ಟಿದ್ದಾರೆ.

ಚೀನಾ ವಿಶ್ವಾಸ ವಂಚನೆ ಮಾಡಿದೆ. ಆದ್ದರಿಂದ ಭಾರತ ಕಡ್ಡಾಯವಾಗಿ ಎಲ್ಲ ಚೈನಿಸ್ ಉತ್ಪನ್ನಗಳನ್ನು ಬಹಿಷ್ಕರಿಸಬೇಕು. ಮಾತ್ರವಲ್ಲ ಚೈನಿಸ್ ಫುಡ್ ಮಾರುವ ಎಲ್ಲ ರೆಸ್ಟೊರೆಂಟ್, ಹೊಟೇಲುಗಳನ್ನು ನಿಷೇಧಿಸಬೇಕಂದು ಅಠಾವಳೆ ಟ್ವೀಟ್ ಮಾಡಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.