ಪಿಪಿಇ ಕಿಟ್ ಧರಿಸಿ ಲಿಫ್ಟ್‌ನಲ್ಲಿ ಸಿಕ್ಕಿಬಿದ್ದ ನರ್ಸ್ ಪ್ರಜ್ಞಾಹೀನ

0
487

ಸನ್ಮಾರ್ಗ ವಾರ್ತೆ

ಕೇರಳ,ಜೂ.19: ಕೊರೋನ ರೋಗಿಗಳ ಸೇವೆಯಲ್ಲಿ ನಿರತರಾಗಿದ್ದ ನರ್ಸ್ ಒಬ್ಬರು ಪಿಪಿಇ ಕಿಟ್ ಧರಿಸಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಲಿಫ್ಟಿನಲ್ಲಿ ಎರಡೂವರೆ ಗಂಟೆಗಳ ವರೆಗೆ ಸಿಕ್ಕಿ ಹಾಕಿದಾಗ ಪ್ರಜ್ಞೆ ಕಳದುಕೊಂಡ ಘಟನೆ ಕೇರಳದ ಕಳಮಶ್ಶೇರಿಯಲ್ಲಿ ನಡೆದಿದೆ. ತಾಹಿರಾ ಶೇಖ್ ಅಕ್ತರ್ ಹುಸೈನ್ ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ ನರ್ಸ್.

ನರ್ಸ್ ಪಿಪಿಇ ಕಿಟ್ ಧರಿಸಿ ಎಕೊ ಮೆಶಿನ್‍ನೊಂದಿಗೆ ಲಿಫ್ಟ್‌ಗೆ ಹತ್ತಿದ ಸಮಯದಲ್ಲಿ ಅದು ಕೆಟ್ಟಿತ್ತು. ಅಪಾಯದ ಕರಗಂಟೆ ಅದುಮಿದರೂ ಯಾರೂ ಗಮನಿಸಲಿಲ್ಲ ಎಂದು ನರ್ಸ್ ಪ್ರಜ್ಞೆ ಬಂದ ಬಳಿಕ ಹೇಳಿದರು. ಬುಧವಾರ ಸಂಜೆ 3:10ಕ್ಕೆ ಆಪರೇಶನ್ ಥಿಯೇಟರಿಗೆ ಎಕೊ ಮೆಶಿನ್ ತರುವಂತೆ ತುರ್ತು ಸಂದೇಶ ಸಿಕ್ಕಿತ್ತು. ಅದರೊಂದಿಗೆ ಮೂರನೆ ಮಹಡಿಯ ಲಿಫ್ಟ್ ಹತ್ತಿದ್ದರು. ಐದೂವರೆಗೆ ತನ್ನನ್ನು ಕೆಳಗೆ ತಲುಪಿಸಲಾಗಿದೆ ಎಂದು ತಿಳಿಯಲು ನನಗೆ ಸಾಧ್ಯವಾಗಿದೆ.

ಆದರೆ ಇದಕ್ಕೆ ಸಂಬಂಧಿಸಿದಂತೆ ನಮಗೆ ದೂರು ಬಂದಿಲ್ಲ. ಘಟನೆಯ ತನಿಖೆ ಮಾಡುತ್ತೇವೆ ಎಂದು ಮುಖ್ಯ ವೈದ್ಯಾಧಿಕಾರಿ ಹೇಳಿದ್ದಾರೆ. ನರ್ಸ್ ಲಿಫ್ಟ್‌ನಲ್ಲಿ ಗಂಟೆಗಟ್ಟಲೆ ಸಿಕ್ಕಿಹಾಕಿಕೊಂಡಿರುವುದು ಅಸಂಬದ್ಧ ಎಂದು ಮೆಡಿಕಲ್ ಕಾಲೇಜು ಅಧಿಕಾರಿಗಳ ವಾದ. ಲಿಫ್ಟ್‌ನಲ್ಲಿ ನರ್ಸ್ 3:37ಕ್ಕೆ ಪ್ರವೇಶಿಸಿದ್ದು. ಆಪರೇಟರ್ ನಾಲ್ಕು ಗಂಟೆಗೆ ನರ್ಸ್ ಅನ್ನು ಹೊರಗೆ ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.