ಸನ್ಮಾರ್ಗ ವಾರ್ತೆ
ಶ್ರೀನಗರ,ಜೂ.19: ಜಮ್ಮು ಕಾಶ್ಮೀರದಲ್ಲಿ ಎರಡು ಕಡೆಯಲ್ಲಿ ನಡೆದ ಘರ್ಷಣೆಯಲ್ಲಿ ಎಂಟು ಭಯೋತ್ಪಾದಕರನ್ನು ಸೇನೆ ಹೊಡೆದುರುಳಿಸಿದೆ. ಪಾಂಪೊರ, ಶೋಪಿಯಾನ್ಗಳಲ್ಲಿ ಘರ್ಷಣೆ ನಡೆದಿತ್ತು. ಗುರುವಾರ ರಾತ್ರೆ ಭಯೋತ್ಪಾದಕರು ಮತ್ತು ಸೈನ್ಯದ ನಡುವೆ ಘರ್ಷಣೆ ನಡೆದಿದೆ. ಪಾಂಪೊರದಲ್ಲಿ ಇಬ್ಬರು ಭಯೋತ್ಪಾದಕರು. ಶೋಪಿಯಾನದಲ್ಲಿ ಆರು ಮಂದಿಯ ಹತ್ಯೆ ನಡೆದಿದೆ. ಸುರಕ್ಷಾ ಸೇನೆ ಮತ್ತು ಪೊಲೀಸರು ಜಂಟಿಯಾಗಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯನ್ನು ನಡೆಸಿದ್ದರು ಎಂದು ವರದಿಯಾಗಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












