ಸನ್ಮಾರ್ಗ ವಾರ್ತೆ
ಜಮ್ಮು,ಕಾಶ್ಮೀರ,ಜೂ.20: ಜಮ್ಮು ಕಾಶ್ಮೀರದ ಹಿರಾನಗರ ಸೆಕ್ಟರಿನಲ್ಲಿ ಪಾಕಿಸ್ತಾನ ಪುನಃ ಕದನ ವಿರಾಮ ಕರಾರು ಉಲ್ಲಂಘಿಸಿದ್ದು, ಶನಿವಾರ ಬೆಳಿಗ್ಗೆ ಹಿರಾನಗರ್ ಕ್ಷೇತ್ರದಲ್ಲಿ ಪಾಕಿಸ್ತಾನದ ಕಡೆಯಿಂದ ಗುಂಡು ಹಾರಾಟ ನಡೆದಿದೆ. ಪ್ರಚೋದನೆಯಿಲ್ಲದೇ ಕಟ್ವ ಜಿಲ್ಲೆಯಲ್ಲಿ ಪಾಕಿಸ್ತಾನದ ಸೈನಿಕರು ಗುಂಡು ಹಾರಿಸಿದರು. ಸೆಲ್ ದಾಳಿ ಮಾಡಿದರು ಎಂದು ವರದಿಯಾಗಿದೆ.
ಬೆಳಗ್ಗೆ 5:10ಕ್ಕೆ ಬಿಎಸ್ಎಫ್ ಯೋಧರು ಪಾಕಿಸ್ತಾನದ ಗೂಢಚಾರಿಕೆ ಡ್ರೋನ್ನನ್ನು ಹೊಡೆದುರುಳಿಸಿದ್ದಾರೆ. ಡ್ರೋನ್ನಲ್ಲಿ ಆಯುಧಗಳು ಪತ್ತೆಯಾಗಿದೆ. ತಾಂಡಾರ್ ಪ್ರದೇಶದಲ್ಲಿ ಶುಕ್ರವಾರ ಪಾಕಿಸ್ತಾನದ ಸೈನಿಕರು ಕದನ ವಿರಾಮ ಒಪ್ಪಂದ ಉಲ್ಲಂಘಿಸಿದರು ಎಂದು ಸೈನಿಕಾಧಿಕಾರಿ ತಿಳಿಸಿದರು.
ಓದುಗರೇ, ಸನ್ಮಾರ್ಗ ಪೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












