H-1B ವೀಸಾ ರದ್ದತಿಗೆ ಡೊನಾಲ್ಡ್ ಟ್ರಂಪ್ ಅಂಕಿತ: ವರ್ಷಾಂತ್ಯದ ವರೆಗೆ ವೀಸಾ ನಿಯಂತ್ರಣ

0
441

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಜೂ.24:ವಲಸಿಗರಿಗೆ ಹೊಸ ಗ್ರೀನ್ ಕಾರ್ಡ್ ಕೊಡುವುದನ್ನು ಡಿಸೆಂಬರ್ 31ರವರೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮಾನತಿನಲ್ಲಿಟ್ಟಿದೆ. ಎಚ್1ಬಿ, ಎಚ್-4 ವೀಸಾಗಳನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಇತರ ದೇಶಗಳ ಜನರನ್ನು ವಿವಿಧ ಉದ್ಯೋಗಗಳಿಗೆ ನೇಮಕಗೊಳಿಸುವುದಕ್ಕೂ ಅಮೆರಿಕ ಬಿಗಿ ನಿಯಂತ್ರಣ ಹೇರಿದೆ.

ಈಗ ಅಮೆರಿಕದಲ್ಲಿ ಕೆಲಸ ಮಾಡುವ ವಿದೇಶಿಯರಿಗೆ ಇದು ಅನ್ವಯವಲ್ಲವಾದರೂ, ಭಾರತದಿಂದ ಐಟಿ ಕೆಲಸ ಹುಡುಕುವವರಿಗೆ ಇದು ಹಿನ್ನಡೆಯಾಗಿದೆ. ಎಚ್1ಬಿ ವೀಸಾ ಸಂಪ್ರದಾಯದಲ್ಲಿ ಸುಧಾರಣೆ ತರಲು ಮೆರಿಟ್ ಆಧಾರದಲ್ಲಿ ವಲಸೆಗೆ ಅವಕಾಶ ನೀಡಲು ಟ್ರಂಪ್ ಸೂಚನೆ ನೀಡಿದ ಬೆನ್ನಿಗೆ ಕಾರ್ಮಿಕ ವೀಸಾಗಳನ್ನು ಈ ವರ್ಷದ ಕೊನೆಯವರೆಗೆ ನಿಲ್ಲಿಸಲು ಅಮೆರಿಕ ಆದೇಶ ಹೊರಡಿಸಿದೆ.

ವಿದ್ಯಾರ್ಥಿಹಳು, ಕಾರ್ಮಿಕರು, ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ವೀಸಾಗಳನ್ನೂ ತಡೆಹಿಡಿಯಲಾಗಿದೆ. ಗ್ರೀನ್ ಕಾರ್ಡ್ ಇದ್ದವರ ಪತ್ನಿಯರಿಗೆ ವೀಸಾ ಕೊಡುವುದನ್ನೂ ಸ್ಥಗಿತಗೊಳಿಸಲಾಗಿದೆ. ಮ್ಯಾನೇಜರ್ ಸಹಿತ ಒಂದು ಕಂಪೆನಿಯು ಅಮೆರಿಕಕ್ಕೆ ವರ್ಗಾವಣೆ ಮಾಡುವಂತಿಲ್ಲ. ಇದರಿಂದ ಸ್ಥಳೀಯರಿಗೆ ಅಮೆರಿಕದಲ್ಲಿ ಐದೂ ಕಾಲು ಲಕ್ಷ ಉದ್ಯೋಗವಕಾಶಗಳು ನಿರ್ಮಾಣವಾಗಲಿದೆ ಎಂದು ವರದಿಯಾಗಿದೆ. ಕೊರೊನ ಮಹಾಮಾರಿಯಿಂದ ಅಮೆರಿಕ ಭಾರೀ ಆರ್ಥಿಕ ನಷ್ಟದಿಂದ ಬಳಲುತ್ತಿದೆ. ಲಕ್ಷಾಂತರ ಅಮೆರಿಕರು ನಿರುದ್ಯೋಗಿಗಳಾಗಿದ್ದು, ಚುನಾವಣೆ ನಿಕಟವಾಗಿರುವ ಪರಿಸ್ಥಿತಿಯಲ್ಲಿ ಟ್ರಂಪ್ ವೀಸಾ ನಿಯಂತ್ರಣ ಹೇರಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.