ಸನ್ಮಾರ್ಗ ವಾರ್ತೆ
ಚಂಡೀಗಡ,ಜೂ.26: ಜಾತ್ಯತೀತ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವರಕ್ಷಣೆ ಎಂಬುದು ಮುಖ್ಯ ವಿಚಾರವಾಗಿದೆ ಎಂದು ಪಂಜಾಬಿನ ಮಾಜಿ ಮುಖ್ಯಮಂತ್ರಿ ಹಾಗೂ ಅಕಾಲಿದಳ ನಾಯಕ ಪ್ರಕಾಶ್ ಸಿಂಗ್ ಬಾದಲ್ ಹೇಳಿದ್ದಾರೆ.
ಗಡಿಯನ್ನು ರಕ್ಷಿಸುವುದು ಪ್ರಧಾನ ವಿಷಯವಾಗಿದೆ. ದೇಶದ ಆಂತರಿಕ ಮತ್ತು ಹೊರಗಿನ ಆರೋಗ್ಯ ಮುಖ್ಯವೂ ಪ್ರಜಾಪ್ರಭುತ್ವಪರವಾದುದು ಎಂದು ಬಾದಲ್ ಹೇಳಿದರು.
ತುರ್ತು ಪರಿಸ್ಥಿತಿ ಒಂದು ವಿಷಗಲ್ಲು. ಸರ್ವಾಧಿಕಾರಿ ನಾಯಕ ಆಡಳಿತ ವ್ಯವಸ್ಥೆಯನ್ನು ತುಳಿದು ಅಪ್ಪಚ್ಚಿ ಮಾಡಿದ್ದನ್ನು ನಾವು ನೋಡಿದ್ದೇವೆ. ಸಂವಿದಾನದ ಪ್ರಜಾಪ್ರಭುತ್ವ ಎಂಬುದು ಜನರ ಕನಸು, ಆಗ್ರಹಗಳ ಸಾಮೂಹಿಕ ಪ್ರತಿಫಲನವಾಗಿದೆ ಎಂದು ಬಾದಲ್ ಹೇಳಿದರು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












