ನೇಪಾಳದ ಭೂಮಿಯ ಮೇಲೂ ಚೀನಾ ಅತಿಕ್ರಮಣ

0
445

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.26: ಚೀನಾ ಹಂತ ಹಂತವಾಗಿ ನೇಪಾಳದ ಭೂಮಿಯನ್ನು ಅತಿಕ್ರಮಿಸಿದೆ ಎಂದು ವರದಿಯಾಗಿದೆ. ಟಿಬೆಟ್‍ನಲ್ಲಿ ರಸ್ತೆ ನಿರ್ಮಿಸುವುದಕ್ಕಾಗಿ ಚೀನಾ ಅತಿಕ್ರಮಣ ಮಾಡಿದ್ದೆಂದು ವರದಿಗಳು ವಿವರಿಸಿವೆ.

ನೇಪಾಳದ ಕೃಷಿ ಸಚಿವಾಲಯದ ಸಮೀಕ್ಷೆ ಸಿಪೋಟ್ ಆಧಾರದಲ್ಲಿ ತಿಳಿದು ಬಂದಂತೆ ನದಿಗಳ ಗಡಿ ನಿರ್ಣಯಿಸುವ 10 ಸ್ಥಳಗಳಲ್ಲಿ ನದಿಯ ತಿರುಗಿಸಿ ಬಿಡಲಾಗಿದೆ. ಹೀಗೆ 33 ಹೆಕ್ಟೆರ್ ಜಮೀನನ್ನು ಚೀನ ಅತಿಕ್ರಮಿಸಿದೆ. ಸಮಯೋಚಿತವಾಗಿ ಪ್ರತಿಕ್ರಿಯಿಸದಿರುತ್ತಿದ್ದರೆ ನೇಪಾಳದ ಇನ್ನೂ ಹೆಚ್ಚುವರಿ ಜಮೀನು ಚೀನಾದ ವಶವಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.