ಸನ್ಮಾರ್ಗ ವಾರ್ತೆ
ವಾಷಿಂಗ್ಟನ್,ಜೂ.26: ಚೀನಾ ಸಹಿತ ಬೆದರಿಕೆಯೊಡ್ಡುವ ದೇಶಗಳಿಂದ ಆತಂಕವನ್ನು ಪರಿಹರಿಸುವ ಸಲುವಾಗಿ ಅಮೆರಿಕ ಸೇನೆಯನ್ನು ಪುನರ್ ವಿನ್ಯಾಸಗೊಳಿಸಲು ಸಿದ್ಧವಾಗಿದೆ ಎಂದು ಅಮೆರಿಕ ಸ್ಟೇಟ್ ಸೆಕ್ರಟರಿ ಮೈಕ್ ಪೊಂಪಿಯೊ ಹೇಳಿದ್ದಾರೆ ಯುರೋಪಿನಲ್ಲಿ ಸೇನೆಯ ಉಪಸ್ಥಿತಿಯನ್ನು ಕಡಿಮೆ ಮಾಡಿ ಚೀನಾದ ಬೆದರಿಕೆಯನ್ನು ಎದುರಿಸುತ್ತಿರುವ ದೇಶಗಳಲ್ಲಿ ಅಮೆರಿಕದ ಸೇನೆಯನ್ನು ಪುನರ್ ವಿನ್ಯಾಸ ಮಾಡುವುದಾಗಿ ಅವರು ತಿಳಿಸಿದರು.
ಭಾರತವೂ ಸೇರಿ ಇತರ ದೇಶಗಳು ಚೀನಾದಿಂದ ಬೆದರಿಕೆಯನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜರ್ಮನಿಯಲ್ಲಿ ಸೇನೆಯನ್ನು ಕಡಿಮೆ ಮಾಡಲು ತೀರ್ಮಾನಿಸಲಾಗಿದೆ. ಬ್ರಸಲ್ಸ್ ಫೋರಂ ಸಭೆಯ ನಡುವೆ ಪೊಂಪಿಯೊ ಹೇಳಿಕೆ ನೀಡಿದ್ದಾರೆ. ಚೀನದ ಕಮ್ಮಯುನಿಸ್ಟ್ ಪಾರ್ಟಿಯ ಬೆದರಿಕೆಯ ಕುರಿತು ಅವರು ಹೇಳಿಕೆ ನೀಡಿದರು. ಭಾರತ, ವಿಯೆಟ್ನಾಂ ಇಂಡೊನೇಷ್ಯಾ, ಫಿಲಿಪ್ಪೀನ್ಸ್ಗಳಿಗೆ ಚೀನಾ ಬೆದರಿಕೆಯಾಗಿದೆ ಎಂದು ಪೊಂಪಿಯೊ ಹೇಳಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












