ಸನ್ಮಾರ್ಗ ವಾರ್ತೆ
ಚೆನೈ: ತೂತ್ತುಕೂಡಿ ಸಾತ್ತಾನ್ಕುಳಂನಲ್ಲಿ ಲಾಕ್ಡೌನ್ ಉಲ್ಲಂಘಿಸಿ ಅಂಗಡಿ ತೆರೆದ ಆರೋಪದಲ್ಲಿ ಬಂಧಿಸಲಾಗಿದ್ದ ತಂದೆ-ಮಗ ಕೋವಲ್ಪಟ್ಟಿ ಸಬ್ ಜೈಲಿನಲ್ಲಿ 24 ಗಂಟೆಗಳೊಳಗೆ ನಿಗೂಢವಾಗಿ ಮೃತಪಟ್ಟಿದ್ದು, ವಿವಾದವಾಗಿದೆ. ಸಾತ್ತಾನ್ ಕುಳಂನ ಮರಕೆಲಸ-ಮೊಬೈಲ್ ಅಂಗಡಿ ಇರುವ ಜಯರಾಜ್ ನಾಟಾರ್(58) ಮಗ ಬೆನ್ನಿಕ್ಸ್(31) ಜೈಲಿನಲ್ಲಿ ನಿಗೂಢವಾಗಿ ಮೃತಪಟ್ಟವರು.
ಕಳೆದ 20ನೆ ತಾರೀಕಿಗೆ ಪೊಲೀಸರು ಬಂಧಿಸಿದ್ದರು. 21ಕ್ಕೆ ಕೊವಿಲ್ಪಟ್ಟಿ ಸಬ್ ಜೈಲಿಗೆ ರಿಮಾಂಡ್ ಮಾಡಲಾಗಿತ್ತು. 22ಕ್ಕೆ ತಲೆಸುತ್ತಿ ಬಿದ್ದ ಬೆನ್ನಿಕ್ಸ್ರನ್ನು ಜೈಲು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು. ನಂತರ ಜಯರಾಜ್ರಿಗೆ ತೀವ್ರ ಜ್ವರ ಕಂಡು ಬಂದಿದ್ದು ಕೋವಿಲ್ಪಟ್ಟಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಮಂಗಳವಾರ ಬೆಳಗ್ಗೆ ಅವರು ಅಲ್ಲಿ ಮೃತಪಟ್ಟಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












