ಸನ್ಮಾರ್ಗ ವಾರ್ತೆ
ಪಾಟ್ನಾ,ಜೂ.26: ಗುರುವಾರ ಉತ್ತರಪ್ರದೇಶ, ಬಿಹಾರದಲ್ಲಿ ಭಾರೀ ಗುಡುಗು ಸಿಡಿಲು ಬಂದಪ್ಪಳಿಸಿದ್ದು, ಮೃತಪಟ್ಟವರ ಸಂಖ್ಯೆ 116ಕ್ಕೇರಿಕೆಯಾಗಿದೆ. ಎರಡು ರಾಜ್ಯಗಳಲ್ಲಿ 116 ಮಂದಿ ಮೃತಪಟ್ಟಿದ್ದಾರೆ ಎಂದು ಶುಕ್ರವಾರ ಹೊರಬಂದ ದತ್ತಾಂಶಗಳು ದೃಢಪಡಿಸುತ್ತಿದೆ ಎಂದು ವರದಿಯಾಗಿದೆ.
ಬಿಹಾರದ ಸರಕಾರ ಈ ಲೆಕ್ಕವನ್ನು ಹೊರಬಿಟ್ಟಿದ್ದು, ಅಲ್ಲಿ ಗುಡುಗು-ಮಿಂಚುಗಳಿಗೆ 92 ಮಂದಿ ಮೃತಪಟ್ಟಿದ್ದಾರೆ. ವಿವಿಧ ಜಿಲ್ಲೆಗಳ ಲೆಕ್ಕಗಳ ಪ್ರಕಾರ ಪಾಟ್ನಾದ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕಮಿಟಿ ಸಾವಿನ ಸಂಖ್ಯೆಯನ್ನು ಬಹಿರಂಗ ಪಡಿಸಿದೆ. ಗುರುವಾರ ಮಿಂಚು ಗುಡುಗುಗಳಿಗೆ 85 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ನೆರೆಯ ಉತ್ತರಪ್ರದೇಶದಲ್ಲಿ 24 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿತ್ತು. 12 ಮಂದಿ ಗಾಯಗೊಂಡಿದ್ದಾರೆ. ಎರಡು ರಾಜ್ಯಗಳಲ್ಲಿ ಒಟ್ಟು 116 ಮಂದಿ ಮೃತಪಟ್ಟಿರುವುದು ಈಗಿನ ಮಾಹಿತಿಯಾಗಿದೆ. ಬಿಹಾರದ ಗೋಪಾಲಗಂಜ್ ಜಿಲ್ಲೆಯಲ್ಲಿ ಅತಿಹೆಚ್ಚು ಮಂದಿ ಮಿಂಚಿಗೆ ಬಲಿಯಾಗಿದ್ದು, 13 ಮಂದಿ ಸಾವಿಗೀಡಾದರು. ಮಿಂಚು ಬಡಿದ ಪರಿಣಾಮ ವಿದ್ಯುದೋಪಕರಣಗಳಿಗೆ ಅಪಾರ ಹಾನಿಯಾಗಿದೆ ಎಂದು ವರದಿ ತಿಳಿಸಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












