ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜೂ.26:ಆಗ್ರಾದ ಕೊರೋನಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಸರಕಾರದ ವಿರುದ್ಧ ಎತ್ತಿದ ಆರೋಪದಲ್ಲಿ ತನ್ನ ನಿಲುವಿನಲ್ಲಿ ದೃಢವಾಗಿದ್ದೇನೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದು ಉತ್ತರಪ್ರದೇಶ ಸರಕಾರದ ವಿರುದ್ಧ ಟೀಕೆಗೆ ಎಂತಹ ಕ್ರಮ ಕೈಗೊಂಡರೂ ಸತ್ಯವನ್ನು ಎತ್ತಿಹಿಡಿಯಲು ಹಿಂಜರಿಯಲಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಸಾರ್ವಜನಿಕ ಕಾರ್ಯಕರ್ತೆ ಎಂಬ ನೆಲೆಯಲ್ಲಿ ಸತ್ಯವನ್ನು ಜನರ ಮುಂದೆ ಹೇಳುವುದು ನನ್ನ ಕರ್ತವ್ಯವಾಗಿದ್ದು, ಅದನ್ನು ನಿರ್ವಹಿಸಿದ್ದೇನೆ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ. ಸಾರ್ವಜನಿಕ ಕಾರ್ಯಕರ್ತೆ ಎಂಬ ನೆಲೆಯಲ್ಲಿ ಉತ್ತರ ಪ್ರದೇಶ ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ. ಸತ್ಯವನ್ನು ಅವರ ಮುಂದೆ ಎತ್ತಿಹಿಡಿಯುತ್ತೇನೆ. ಸರಕಾರಕ್ಕಾಗಿ ಪ್ರಚಾರ ಮಾಡುವುದು ನನ್ನ ಕರ್ತವ್ಯವಲ್ಲ ಎಂದು ಪ್ರಿಯಾಂಕಾ ಗಾಂಧಿ ಬೆದರಿಕೆ ಹಾಕುವ ಮೂಲಕ ರಾಜ್ಯಸರಕಾರ ಸಮಯ ವ್ಯರ್ಥ ಮಾಡುತ್ತಿದೆ ಎಂದು ಹೇಳಿದ್ದಾರೆ.
ಅವರು ಯಾವ ಕ್ರಮ ಬೇಕಾದರೂ ಕೈಗೊಳ್ಳಬಹುದು. ಸತ್ಯವನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡುತ್ತೇನೆ. ನಾನು ಇಂದಿರಾಗಾಂಧಿಯ ಮೊಮ್ಮಗಳು. ಕೆಲವು ನಾಯಕರಂತೆ ನಾನು ಬಿಜೆಪಿಯ ಅಘೋಷಿತ ವಕ್ತಾರಳಲ್ಲ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












