ಸನ್ಮಾರ್ಗ ವಾರ್ತೆ
ಸತಾರಾ,ಜು.7: ಮಹಾರಾಷ್ಟ್ರದ ಸತಾರಾದಲ್ಲಿ ಅಚ್ಚರಿಯ ಪ್ರಕರಣವೊಂದು ಹೊರಬಿದ್ದಿದೆ. ಪಿಪಿಇ ಕಿಟ್ ಧರಿಸಿ ಇಲ್ಲಿನ ಆಭರಣ ಅಂಗಡಿಯಲ್ಲಿ ಕಳವು ಮಾಡಲಾಗಿದೆ. ಅಂಗಡಿಯಿಂದ 780 ಗ್ರಾಂ ಚಿನ್ನದ ಆಭರಣವನ್ನು ಕಳ್ಳರು ಕದ್ದಿದ್ದಾರೆ. ಈ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಆರೋಪಿಗಳು ಪಿಪಿಇ ಕಿಟ್ನ ಕ್ಯಾಪ್, ಮಾಸ್ಕ್, ಪ್ಲಾಸ್ಟಿಕ್ ಜಾಕೆಟ್ ಮತ್ತು ಹ್ಯಾಂಡ್ ಗ್ಲೌಸ್ ಧರಿಸಿದ್ದರು.
ಜುಲೈ 5 ರಂದು ಮಧ್ಯಾಹ್ನ 2:00 ರ ಸುಮಾರಿಗೆ ಹಿರಾಲಾಲ್ ಕಾಂತಿಲಾಲ್ ಸರ್ಫ್ ರವರ ಅಂಗಡಿಯಲ್ಲಿ ಮೂವರು ಕಳ್ಳರು ನುಗ್ಗಿದ್ದಾರೆ ಎಂದು ಸತಾರಾ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದಾರೆ, ಆದರೆ ಅವರ ಮುಖ ಗುರುತು ಸಿಗುತ್ತಿಲ್ಲ. ಎಲೆಕ್ಟ್ರಾನಿಕ್ ಕಣ್ಗಾವಲು ಸಹಾಯದಿಂದ ಪೊಲೀಸರು ಎಲ್ಲರಿಗಾಗಿ ಶೋಧ ನಡೆಸುತ್ತಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












