ಇಸ್ರೇಲಿನಿಂದ ನೂತನ ಬೇಹುಗಾರಿಕಾ ಉಪಗ್ರಹ ಉಡಾವಣೆ

0
487

ಸನ್ಮಾರ್ಗ ವಾರ್ತೆ

ಟೆಲ್‍ಅವಿವ್,ಜು.7: ಸೈನಿಕ ಗುಪ್ತಚಾರಿಕೆಗಾಗಿ ಇಸ್ರೇಲ್ ಹೊಸ ಬೇಹುಗಾರಿಕಾ ಉಪಗ್ರಹವನ್ನು ಹಾರಿಸಿದೆ. ಉನ್ನತ ಕಾರ್ಯಕ್ಷಮತೆಯುಳ್ಳ ಸ್ಯಾಟಲೈಟ್ ಇದು. ಸೋಮವಾರ ಇಸ್ರೇಲ್ ರಕ್ಷಣಾ ಏರ್‍ಸ್ಪೇಸ್ ಇಂಡಸ್ಟ್ರೀಸ್ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. Ofek-16ಎಂದು ಉಪಗ್ರಹಕ್ಕೆ ನಾಮಕರಣ ಮಾಡಲಾಗಿದೆ. ಸ್ಥಳೀಯ ಸಮಯ ಬೆಳಗ್ಗೆ ನಾಲ್ಕು ಗಂಟೆ ಉಪಗ್ರಹ ಉಡಾವಣೆ ಮಾಡಲಾಗಿದೆ.

ದೃಢ ಸಾಮರ್ಥ್ಯವನ್ನು ಹೊಂದಿದ ಇಲೆಕ್ಟ್ರೊ ಒಪ್ಟಿಕಲ್ ಗುಪ್ತಚರ ಉಪಗ್ರಹವಿದು. ಹಲವು ಪ್ರಯೋಗಗಳನ್ನು ಇದು ಮಾಡುತ್ತದೆ ಎಂದು ಸಚಿವಾಲಯ ಹೇಳಿಕೊಂಡಿದೆ.

ಒಂದು ವಾರದೊಳಗೆ ಉಪಗ್ರಹದಿಂದ ಮೊದಲ ಚಿತ್ರ ಲಭಿಸಲಾರಂಭಿಸಿದೆ. ಉಪಗ್ರಹದ ಕುರಿತು ಹೆಚ್ಚಿನ ವಿವರಗಳನ್ನು ಇಸ್ರೇಲ್ ಬಿಟ್ಟುಕೊಟ್ಟಿಲ್ಲ. ವಲಯದಲ್ಲಿ ಇರಾನ್‍ನ ಚಟುವಟಿಕೆಗಳ ಮೇಲೆ ನಿಗಾ ಇಡುವುದು ಉಡಾವಣೆಯ ಉದ್ದೇಶ ಎಂದು ಇಸ್ರೇಲ್ ಪಬ್ಲಿಕ್ ರೇಡಿಯೊ ವರದಿ ಮಾಡಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ