ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜು.9: ಸಿಎಎ ವಿರುದ್ಧ ಹೋರಾಟಗಾರರಿಗೆ ಆಹಾರ ವಿತರಿಸಿದಕ್ಕಾಗಿ ದಿಲ್ಲಿಯಲ್ಲಿ ಸಿಖ್ ಯುವಕನನ್ನು ಬಂಧಿಸಲಾಗಿದೆ. ಭಯೋತ್ಪಾದಕರೊಂದಿಗೆ ಸಂಬಂಧ ಆರೋಪ ಹೊರಿಸಿ ಸಿಖ್ ಯುವಕನನ್ನು ಬಂಧಿಸಿ ಸುಳ್ಳು ಕೇಸು ಹಾಕಲಾಗಿದೆ ಎಂದು ಅವರ ಸಹೋದರ ಹೇಳಿದ್ದಾರೆ.
ಬಂದೂಕು ಸಿಕ್ಕಿದೆ ಎಂಬ ಸುಳ್ಳು ಆರೋಪವನ್ನು ಯುವಕನ ಮೇಲೆ ಹೇರಲಾಗಿದೆ ಎಂದು ಸಹೋದರ ಮಾಧ್ಯಮಗಳಿಗೆ ಹೇಳಿದರು.
ಶಾಹಿನ್ ಬಾಗ್ನ ಸಿಎಎ ವಿರೋಧಿ ಪ್ರತಿಭಟನೆಕಾರರಿಗೆ ಆಹಾರ ನೀಡಿದ್ದಕ್ಕೆ ಪ್ರತಿಕವಾಗಿ 21 ವರ್ಷದ ಲವ್ ಪ್ರೀತ್ ಸಿಂಗ್ರನ್ನು ಬಂಧಿಸಲಾಗಿದೆ ಎಂದು ಸಹೋದರ ಸತ್ನಾಂ ಸಿಂಗ್ ಹೇಳಿದರು. ಘಟನೆಯಲ್ಲಿ ಸ್ವತಂತ್ರ ತನಿಖೆ ನಡೆಯಬೇಕೆಂದು ಅವರು ಹೇಳಿದರು.
ಶಾಹಿನ್ ಬಾಗ್ನಲ್ಲಿ ಸಿಖ್ ಸಮುದಾಯದ ನೇತೃತ್ವದಲ್ಲಿ ಲವ್ ಪ್ರೀತ್ ಸಹಿತ ಉಚಿತ ಆಹಾರ ವಿತರಣಾ ಕೇಂದ್ರವನ್ನು ಸ್ಥಾಪಿಸಿದ್ದರು. ಅವನ ಕೈಯಲ್ಲಿ ಎರಡು ಪಿಸ್ತೂಲ್ಗಳು ಇತ್ತೆಂದು ಸುಳ್ಳು ಆರೋಪ ಹೊರಿಸಲಾಗಿದೆ. ಪಟಿಯಾಲದ ಸಮನದಲ್ಲಿ ಸಿಸಿಟಿವಿ ಶಾಪ್ನಲ್ಲಿ ಲವ್ ಪ್ರೀತ್ ಸೇಲ್ಸ್ಮ್ಯಾನ್ ಆಗಿದ್ದರು.
ಲಾಕ್ಡೌನ್ ಸಮಯದಲ್ಲಿ ಬಡ ಕುಟುಂಬಗಳಿಗೆ ಆಹಾರ ವಸ್ತುಗಳನ್ನು ವಿತರಿಸಲು ಸಿಖ್ ಸ್ವಯಂ ಸೇವಾ ಸಂಘಟನೆಯೊಂದಿಗೆ ಸಹಕರಿಸಿದ್ದಾರೆ ಎಂದು ಸಿಂಗ್ ಹೇಳಿದರು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












