ಸನ್ಮಾರ್ಗ ವಾರ್ತೆ
ವಾಷಿಂಗ್ಟನ್,ಜು.9: ಅಮೆರಿಕದಲ್ಲಿ ಕೊರೋನ ಪೀಡಿತರ ಸಂಖ್ಯೆ ದಿನಂಪ್ರತಿ ಹೆಚ್ಚುತ್ತಿರುವಾಗಲೂ ಭ್ರಮಣೆಗೊಳಗಾದ ನಿಲುವುಗಳನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆಗೆದುಕೊಳ್ಳುತ್ತಿರುವಂತೆ ಕಂಡು ಬರುತ್ತಿದೆ. ಕೊರೋನ ಪ್ರತಿರೋಧದ ಭಾಗವಾಗಿ ಮುಚ್ಚಿಟ್ಟಿರುವ ಅಮೆರಿಕದ ಶಾಲೆಗಳನ್ನು ಕೂಡಲೇ ತೆರಯಬೇಕೆಂದು ಟ್ರಂಪ್ ಆಜ್ಞಾಪಿಸಿದ್ದು, ಇಲ್ಲದಿದ್ದರೆ, ಶಾಲೆಗಳ ಫೆಡರಲ್ ಧನ ಸಹಾಯ ತಡೆ ಹಿಡಿಯುವುದಾಗಿ ಬೆದರಿಕೆ ಹಾಕಿದ್ದಾರೆ.
ಜರ್ಮನಿ, ಡೆನ್ಮಾರ್ಕ್, ನೋರ್ವೆ, ಸ್ವೀಡನ್ ಮುಂತಾದ ಹಲವು ದೇಶಗಳಲ್ಲಿ ಶಾಲೆಗಳಿಗೆ ಯಾವುದೇ ಅಡ್ಡಿಯಿಲ್ಲ ಅಲ್ಲಿ ಶಾಲೆಗಳು ಆರಂಭವಾಗಿವೆ ಎಂದು ಟ್ರಂಪ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ನವೆಂಬರ್ನಲ್ಲಿ ನಡೆಯುವ ಚುನಾವಣೆಯ ಮೊದಲು ಶಾಲೆಗಳು ತೆರೆದರೆ ಅದು ತಮ್ಮ ರಾಜಕೀಯಕ್ಕೆ ನಷ್ಟವಾಗಬಹುದು ಎಂದು ಡೆಮಕ್ರಾಟುಗಳು ತಿಳಿದುಕೊಂಡಿದ್ದಾರೆ.
In Germany, Denmark, Norway, Sweden and many other countries, SCHOOLS ARE OPEN WITH NO PROBLEMS. The Dems think it would be bad for them politically if U.S. schools open before the November Election, but is important for the children & families. May cut off funding if not open!
— Donald J. Trump (@realDonaldTrump) July 8, 2020
ಆದರೆ, ಮಕ್ಕಳಿಗೂ ಕುಟುಂಬಗಳಿಗೂ ಶಾಲೆ ತೆರೆಯುವುದು ಪ್ರಧಾನ ವಿಷಯವಾಗಿದೆ. ಶಾಲೆಗಳು ತೆರೆಯದಿದ್ದರೆ, ಧನಸಹಾಯವನ್ನು ನೀಡುವುದತನ್ನು ಕೊನೆಗೊಳಿಸಲಾಗುವುದು ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












