ಸನ್ಮರ್ಗಾ ವಾರ್ತೆ
ಅಹ್ಮದಾಬಾದ್,ಜು.10: ಆನ್ಲೈನ್ ಮಾರಾಟ ವೆಬ್ಸೈಟ್ಗಳಲ್ಲಿ ಭಾರತದ ಉತ್ಪನ್ನಗಳನ್ನು ಗುರುತಿಸಲು ಕೇಸರಿ ಬಣ್ಣ ಇರಬೇಕೆಂದು ಗುಜರಾತ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅನಕ್ಷರಸ್ಥರು, ಗೊತ್ತಿಲ್ಲದವರರಿಗೆ ಭಾರತದ ಉತ್ಪನ್ನವನ್ನು ಸುಲಭದಲ್ಲಿ ಗುರುತಿಸಲು ಕೇಸರಿ ಬಣ್ಣ ನೀಡುವುದು ಸಹಾಯಕವಾಗಲಿದೆ. ಅಹ್ಮದಾಬಾದ್ನ ಅಡ್ವೊಕೇಟ್ ಯಾತಿನ್ ಸೋನಿ ಎಂಬವರು ಗುಜರಾತಿನ ಹೈಕೋರ್ಟಿನಲ್ಲಿ ಈ ಕುರಿತು ಅರ್ಜಿ ಸಲ್ಲಿಸಿದ್ದಾರೆ.
ಈಗ ಭಾರತೀಯ ದೇಶಿ ಉತ್ಪನ್ನಗಳನ್ನು ಗುರುತಿಸಲು ಯಾವುದೇ ವಿಧಾನವಿಲ್ಲ. ಕೇಸರಿ ಅಥವಾ ಆರೆಂಜ್ ಬಣ್ಣ ಇರುವ ಕೋಡ್ಗಳನ್ನು ನೀಡಬೇಕು. ಕೇಸರಿಯಾದರೆ ಬಹಳ ಸುಲಭದಲ್ಲಿ ಗುರುತಿಸಲು ಸಾಧ್ಯವಾಗಬಹುದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯ ಆತ್ಮನಿರ್ಭರ್ ಭಾರತ್ ಘೋಷಣೆಯಲ್ಲಿ ಸ್ವದೇಶಿ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ಆವಶ್ಯತೆ ಎದ್ದು ನಿಂತಿತ್ತು. ಎಲ್ಲ ಉತ್ಪನ್ನಗಳಿಗೆ ಬಣ್ಣದ ಗುರುತು ಹಾಕಿದರೆ ಉತ್ತಮ. ಸುಲಭದಲ್ಲಿ ಗುರುತಿಸಬಹುದು. ವಿದೇಶದಲ್ಲಿ ತಯಾರಾದ ಭಾರತೀಯ ಉತ್ಪನ್ನಗಳಿಗೆ ನೀಲಿ, ಪೂರ್ಣ ವಿದೇಶದಲ್ಲಿ ತಯಾರಾದ ಉತ್ಪನ್ನಗಳಿಗೆ ಕೆಂಪು ಬಣ್ಣ ಹಾಕಬೇಕೆಂದು ಅರ್ಜಿದಾರರು ಹೇಳಿದ್ದಾರೆ. ಬಹುರಾಷ್ಟ್ರೀಯ ಕಂಪೆನಿ ಉತ್ಪನ್ನಗಳಿಗೆ ಗುಲಾಬಿ ಬಣ್ಣ ಹಾಗೂ ವಿದೇಶಿ ಕಂಪೆನಿಗಳು ಭಾರತದಲ್ಲಿ ನಿರ್ಮಿಸುವುದಾದರೆ ಹಳದಿ ಬಣ್ಣ ನೀಡಬೇಕೆಂದು ಅರ್ಜಿಯಲ್ಲಿ ಹೇಳಲಾಗಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












