ಕೋವಿಡ್ ಸಾವಿನ ಬಗ್ಗೆ ಹೆಚ್ಚುತ್ತಿರುವ ಜನರ ಸಂಶಯಕ್ಕೆ ಜಿಲ್ಲಾಡಳಿತ ಸ್ಪಂದಿಸ ಬೇಕಿದೆ- ಫಾರೂಕ್ ಉಳ್ಳಾಲ್ ಆಗ್ರಹ

0
669

ಸನ್ಮಾರ್ಗ ವಾರ್ತೆ

ಮಂಗಳೂರು : ಕೋವಿಡ್ -19 ಟೆಸ್ಟ್ ಆರೋಗ್ಯ ಕಾಯ ಇರುವವರನ್ನು, ಫ್ಲೂ, ಶೀತ, ತಲೆನೋವು ಹೊಂದಿದವರನ್ನೂ ‘ಕೋವಿಡ್ -19 ಪಾಸಿಟಿವ್’ ಎಂದು ತೋರಿಸುತ್ತದೆ. ಕೋವಿಡ್ ಪೀಡಿತರೆಂದು ತೀವ್ರನಿಗಾ ಘಟಕ ಸೇರುವ ವೃದ್ಧ ರೋಗಿಗಳು, ತಾವು ಈ ತನಕ ಬಳಸುತ್ತಿದ್ದ ಔಷಧಿ ಬಳಕೆಗೆ ಅವಕಾಶ ನಿರಾಕರಿಸಲ್ಪಟ್ಟ ಕಾರಣಕ್ಕೆ ಸಾವನ್ನಪ್ಪುತ್ತಿದ್ದಾರೆ ಎಂಬ ದೂರು ಜಿಲ್ಲೆಯಲ್ಲಿ ಸಾರ್ವತ್ರಿಕವಾಗಿ ಕೇಳಿ ಬರುತ್ತಿವೆ.

ಕೋವಿಡ್ ಪೀಡಿತರೆಂದು ಗುರುತಿಸಲಾಗುವ ಜನರ ಸಾವಿನ ಸಂಖ್ಯೆಯೂ ಹೆಚ್ಚುತ್ತಿರುವುದರಿಂದ ಜನರು ಆತಂಕಿತಕ್ಕೀಡಾಗಿದ್ದಾರೆ. ಆದ್ದರಿಂದ ಸರ್ಕಾರ, ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಕೂಡಲೇ ಈ ಕುರಿತು ಗಮನ ಹರಿಸಿ, ಸೂಕ್ತ ಕ್ರಮ ಜರುಗಿಸಬೇಕು ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್ ಒತ್ತಾಯಿಸಿದ್ದಾರೆ.

ಇತರ ರೋಗಗಳಿಗೆ, ನಿಗದಿತವಾಗಿ ಸೇವಿಸುತ್ತಿರುವ ಔಷಧಿಗಳನ್ನು ಪಡೆಯದಂತೆ ತಡೆಯೊಡ್ಡುವುದರಿಂದ ರೋಗ ಉಲ್ಬಣಿಸಿ ವೃದ್ಧ ರೋಗಿಗಳು ಹಾಗೂ ಅಂಗಾಂಗ ವೈಫಲ್ಯ ಇದ್ದವರು ಸಾವೀಡಾಗುತ್ತಿರುವುದು ಮೇಲ್ನೋಟಕ್ಕೆ ಸತ್ಯ ಎಂದೆನಿಸುತ್ತಿವೆ.

ಕೋವಿಡ್ ಸಾವಿಗೆ ಬಲಿಯಾದ ವ್ಯಕ್ತಿಯ ಕುಟುಂಬ ಸದಸ್ಯರು ಹಾಗೂ ಎರಡು ದಿನಗಳಲ್ಲಿ ಎರಡೆರಡು ರೀತಿಯ ಕೋವಿಡ್ ರಿಪೋರ್ಟ್ ಪಡೆದ ವ್ಯಕ್ತಗಳು ಮಾಧ್ಯಮಗಳಲ್ಲಿ ಕೋವಿಡ್ -19 ಪರೀಕ್ಷೆಯ ಕುರಿತು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.

ಮಳೆಗಾಲದಲ್ಲಿ ಫ್ಲೂ, ನೆಗಡಿ, ಶೀತ ಕಂಡು ಬರುವುದು ಕರಾವಳಿಯಲ್ಲಿ ಸಾಮಾನ್ಯ ಘಟನೆ. ಕೆಲವರಿಗೆ ಡೆಂಗ್ಯೂ, ಮಲೇರಿಯಾ, ನ್ಯುಮೋನಿಯಾ ಮುಂತಾದ ತೀವ್ರವಾದ ಕಾಯಿಲೆಗಳೂ ಬಾಧಿಸುವುದಿದೆ.

ಈಗ, ಮಳೆಯೂ ನಿರಂತರವಾಗಿ ಸುರಿಯುತ್ತಿದೆ. ಕೊರೋನ ತಪಾಸಣೆಗೆ ಇರುವ ಯಂತ್ರಗಳು ಇಂತಹವರನ್ನೇ ಪಾಸಿಟಿವ್ ಆಗಿ ಗುರುತಿಸುತ್ತವೆ ಎಂದು ಜನರು ಹೇಳುತ್ತಿದ್ದಾರೆ. ಕೋವಿಡ್ ಪಾಸಿಟಿವ್ ಆಗಿ ಕ್ವಾರಂಟೈನ್‌ನಲ್ಲಿ ಒಂದು ವಾರಕ್ಕೂ ಹೆಚ್ಚು ದಿನಗಳಲ್ಲಿದ್ದವರಲ್ಲಿ ಕೋವಿಡ್ ಲಕ್ಷಣವೇ ಗೋಚರಿಸದೇ, ಅವರು ಕ್ವಾರಂಟೈನ್‌ನಿಂದ ಬಿಡುಗಡೆ ಗೊಳ್ಳುತ್ತಿರುವುದು ಕಾಣಲು ಸಿಗುತ್ತಿವೆ.

ಲಿವರ್, ಕಿಡ್ನಿ, ಹೃದಯ ಕಾಯಿಲೆ ಹಾಗೂ ಮತ್ತಿತರ ರೋಗಗಳಿಂದ ಬಳಲುತ್ತಿರುವವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದರೆ, ಮೊದಲು ಕೋವಿಡ್ ಟೆಸ್ಟ್ ಮಾಡಿದಾಗ ಕೋವಿಡ್ ಪಾಸಿಟಿವ್ ಅವರಲ್ಲಿ ತಪ್ಪದೆ (ಎಲ್ಲಾ ರೋಗಿಗಳಲ್ಲೂ)ಕಂಡು ಬರುತ್ತಿರುವುದರ ಕಡೆಗೂ ರೋಗಿಗಳ ಮನೆಯವರು ಸಂಶಯ ವ್ಯಕ್ತಪಡಿಸುತ್ತಿರುವುದರಿಂದ ಜಿಲ್ಲಾಡಳಿತ, ಜನರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಸ್ಪಂದಿಸುವ ಅಗತ್ಯವಿದೆ ಎಂದು ಅವರು ಆಗ್ರಹಿಸಿದರು‌.

ಕೋವಿಡ್ ಪೀಡಿತರ ಹೆಸರು ಗೌಪ್ಯವಾಗಿಡುತ್ತೇವೆ ಎಂದು ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಹೇಳುತ್ತಿದ್ದರೂ ವ್ಯಕ್ತಿಯ ಹೆಸರನ್ನಷ್ಟೇ ರಹಸ್ಯವಾಗಿರಿಸಿ ಉಳಿದ ಕುರುಹುಗಳನ್ನು ಪರೋಕ್ಷವಾಗಿ ತಿಳಿಸಿ ರೋಗಿಯ ಪರಿಚಯ ಹೇಳಲಾಗುತ್ತಿವೆ. ಇದು ರೋಗಿ ಮತ್ತು ಅವರ ಕುಟುಂಬಸ್ಥರನ್ನು ಮಾನಸಿಕವಾಗಿ ಹಿಂಸಿಸುತ್ತಿವೆ. ದಯವಿಟ್ಟು ಇಂತಹ ಅಮಾನವೀಯ ಪ್ರಕಟಣೆಯ ವಿರುದ್ಧ ಅಗತ್ಯ ಕ್ರಮ ಜರುಗಿಸ ಬೇಕೆಂದು ಅವರು ಆಗ್ರಹಿಸಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.