ಐದು ವಾರದೊಳಗೆ ರಾಷ್ಟ್ರೀಯ ಏಕತಾ ಸರ್ಕಾರದ ರಚನೆಯನ್ನು ಒಳಗೊಂಡಂತೆ, ಫೆಲೆಸ್ತೀನಿನ ಒಳಿತಿಗಾಗಿ ಈಜಿಪ್ಟ್ ನ ಜೊತೆ ಹಮಾಸ್ ಕೈ ಜೋಡಿಸಿದೆ ಎಂದು ಅನಾಡೋಲು ಪತ್ರಿಕೆ ವರದಿ ಮಾಡಿದೆ.
ವರದಿಯ ಪ್ರಕಾರ ಈಜಿಪ್ಟ್ , ಫೆಲೆಸ್ತೀನಿ ಪ್ರಾಧಿಕಾರ (ಪಿಎ)ದ ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ರ ಮುಂದಿನ ನಡೆಯನ್ನು ಕಾಯುತ್ತಿದೆ.
ಫೆಲೆಸ್ತೀನಿನ ಪ್ರಾಧಿಕಾರವು ಗಾಝ ಪಟ್ಟಿಯಲ್ಲಿ ನಿರ್ಬಂಧವನ್ನು ಸಡಿಲಗೊಳಿಸುವುದನ್ನು ಈಜಿಪ್ಟ್ ಎದುರುನೋಡುತ್ತಿದೆ.
ಮೂಲದ ಪ್ರಕಾರ, ಫೆಲೆಸ್ತೀನಿನ ಬಣಗಳು ಐದು ವಾರಗಳವರೆಗೆ ರಾಷ್ಟ್ರೀಯ ಐಕ್ಯತೆಯ ಸರ್ಕಾರವನ್ನು ರೂಪಿಸುತ್ತವೆ.
ಇದರಿಂದ ಗಾಝದ ನಿಯಂತ್ರಣದ ಸಮಯದಲ್ಲಿ ಹಮಾಸ್ ನಿಂದ ನೇಮಕಗೊಂಡ ಎಲ್ಲ ಸಿವಿಲ್ ನೌಕರರನ್ನು ತನ್ನ ವಶಕ್ಕೆ ಪ್ರಾಧಿಕಾರ ಪಡೆದುಕೊಳ್ಳುತ್ತದೆ. ಹಮಾಸ್ ಗಾಝದಲ್ಲಿ ತನ್ನ ಕೆಲಸವನ್ನು ಕಡೆಗಣಿಸುತ್ತಿದೆ ಎಂದು ಫತಹ್ ಮತ್ತು ಫೆಲೆಸ್ತೀನೀ ಪ್ರಾಧಿಕಾರವು ಆರೋಪಿಸಿವೆ. ಆದರೆ ಹಮಾಸ್ ಈ ಆರೋಪಗಳನ್ನು ನಿರಾಕರಿಸುತ್ತಿದೆ. ಸಂಬಳ ಕಡಿತ, ವೈದ್ಯಕೀಯ ಸೇವೆಗಳನ್ನು ನಿಲ್ಲಿಸುವುದು ಮತ್ತು ಗಾಝ ಸಚಿವಾಲಯಗಳಿಗೆ ಹಣ ಪೂರೈಕೆಯನ್ನು ಕಡಿತಗೊಳಿಸುವುದರ ಮೂಲಕ ಕಳೆದ ವರ್ಷ ಫೆಲೆಸ್ತೀನಿ ಪ್ರಾಧಿಕಾರವು ಗಾಝ ಪಟ್ಟಿಯ ಮೇಲೆ ನಿರ್ಬಂಧವನ್ನು ವಿಧಿಸಿದೆ.












