ಒಂದೇ ದಿನದಲ್ಲಿ 29,429 ಮಂದಿಗೆ ಕೊರೋನ ಸೋಂಕು

0
477

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜು.15: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 29,429 ಮಂದಿಗೆ ಕೊರೋನ ಸೋಂಕು ತಗುಲಿದೆ. 582 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದುವರೆಗೆ ದೇಶದಲ್ಲಿ ಒಟ್ಟು 9,36,181 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ.

5,92,031 ಮಂದಿ ರೋಗ ಮುಕ್ತರಾಗಿದ್ದಾರೆ. 3,19,840 ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಜುಲೈ 14ರವರೆಗೆ 1,24,12,664 ಸ್ಯಾಂಪಲ್‍ಗ ಪರಿಶೀಲನೆ ಪೂರ್ತಿಯಾಗಿದೆ. ಮಂಗಳವಾರ 3,20,161 ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ತಿಳಿಸಿದರು.

ಕೊರೋನ ಹರಡುತ್ತಿರುವ ಬೆಂಗಳೂರಿನಲ್ಲಿ ಏಳು ದಿವಸದ ಲಾಕ್‌ಡೌನ್ ಘೋಷಿಸಲಾಗಿದೆ. ನಿನ್ನೆ ಲಾಕ್‌ಡೌನ್ ಆರಂಭವಾಗಿದ್ದು 22ರಂದು ಸಂಜೆ ಐದು ಗಂಟೆಯವರೆಗೆ ಇರಲಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲಯಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.