ಸನ್ಮಾರ್ಗ ವಾರ್ತೆ
ಅಯೋಧ್ಯೆ,ಜು.15: ರಾಮ ಮಂದಿರ ನಿರ್ಮಾಣ ಕಾರ್ಯದ ವೇಳೆ ಮೇ ತಿಂಗಳಲ್ಲಿ ಶಿವಲಿಂಗ, ಏಳು ಕಪ್ಪು ಸ್ಥಂಭಗಳು, ಆರು ಕೆಂಪು ಮರಳುಗಲ್ಲು ಸ್ಥಂಭಗಳು, ನಾಲ್ಕು ತುಂಡಾದ ದೇವ, ದೇವತೆಗಳ ವಿಗ್ರಹ ದೊರಕಿವೆ ಎಂದು ನಿರ್ಮಾಣ ಉಸ್ತುವಾರಿ ಹೊತ್ತ ಟ್ರಸ್ಟ್ ಮಾಹಿಇ ನೀಡಿದ ಬೆನ್ನಿಗೆ ಅಯೋಧ್ಯೆಯಲ್ಲಿರುವ ರಾಮ ಜನ್ಮಭೂಮಿ ಬೌದ್ದರ ಸ್ಥಳವಾಗಿದೆ ಎಂದು ಬೌದ್ಧರು ಪ್ರತಿಭಟನೆಗಿಳಿದಿದ್ದಾರೆ.
ಪ್ರಾಚೀನ ಕಾಲದಲ್ಲಿ ಬೌದ್ಧ ಧರ್ಮದ ಕೇಂದ್ರವೆಂದು ಪರಿಗಣಿಸಲಾದ ಸಾಕೇತ್ ನಗರವೇ ಅಯೋಧ್ಯೆ ಎಂದು ಬೌದ್ಧ ಧರ್ಮೀಯ ಅನುಯಾಯಿಗಳ ನಂಬಿಕೆಯಾಗಿದೆ.
ಯುನೆಸ್ಕೋ ಈ ಸ್ಥಳದಲ್ಲಿ ಉತ್ಪನನ ನಡೆಸಬೇಕು ಹಾಗೂ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಿ ನಗರದಲ್ಲಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯ ಬಳಕ ಬೌದ್ಧ ಭಿಕ್ಷುಗಳು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.
ರಾಮ ಜನ್ಮಭೂಮಿ ಸ್ಥಳದಲ್ಲಿ ದೊರೆತ ವಸ್ತುಗಳ ಕುರಿತ ಮಾಹಿತಿ ಬಹಿರಂಗಪಡಿಸಬೇಕೆಂದೂ ಪ್ರತಿಭಟನಾಕಾರರು ಆಗ್ರಹಿಸಿದ್ದು, ಒಂದು ತಿಂಗಳ ಅವಧಿಯಲ್ಲಿ ತಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಕೋರಿ ಅಯೋಧ್ಯೆಯ ಆಡಳಿತ ಮಂಡಳಿಯ ಮೂಲಕ ರಾಷ್ಟ್ರಪತಿ ಹಾಗೂ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿಯನ್ನು ಸಲ್ಲಿಸಿರುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.
ನಾವು ಬೌದ್ಧ ನಾಯಕರ ಜ್ಞಾಪಕ ಪತ್ರಗಳನ್ನು ಸ್ವೀಕರಿಸಿದ್ದೇವೆ ಮತ್ತು ಅದನ್ನು ಉದ್ದೇಶಿಸಿ ಮಾತನಾಡುವ ವ್ಯಕ್ತಿಗಳಿಗೆ ಕಳುಹಿಸುತ್ತೇವೆ” ಎಂದ ಫೈಜಾಬಾದ್ ನಗರ ಮ್ಯಾಜಿಸ್ಟ್ರೇಟ್ ಎಸ್ ಪಿ ಸಿಂಗ್,” ನಮ್ಮ ಆಶ್ವಾಸನೆಗಳ ಮೇರೆಗೆ ಬೌದ್ಧ ಸಮುದಾಯವು ತನ್ನ ಧರಣಿ ಮತ್ತು ಉಪವಾಸವನ್ನು ನಿಲ್ಲಿಸಿದೆ ಎಂದು ಹೇಳಿದರು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












