ಕೋವಿಡ್-19 ಮಹಾಮಾರಿ ಹತೋಟಿಗೆ ತರುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲ- ಟಿ.ಎಂ.ಶಾಹೀದ್ ತೆಕ್ಕಿಲ್ ಆರೋಪ

0
589

ಸನ್ಮಾರ್ಗ ವಾರ್ತೆ

ಸುಳ್ಯ,ಜು.15: ಪ್ರಪಂಚದಾದ್ಯಂತ ಹಬ್ಬುತ್ತಿರುವ ಮಹಾಮಾರಿ ಸಾಂಕ್ರಾಮಿಕ ರೋಗ ಕೋವಿಡ್-19 ವಿರುಧ್ದ ಹೋರಾಡಲು ರಾಜ್ಯದಲ್ಲಿ ರಾಜ್ಯ ಬಿಜೆಪಿ ಸರಕಾರಕ್ಕೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರವರು, ಕೆ.ಪಿ.ಸಿ.ಸಿ.ಯ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಮತ್ತು ವಿರೋಧ ಪಕ್ಷದವರು ಸಂಪೂರ್ಣ ಸಹಕಾರ ನೀಡಿದ್ದರೂ ರಾಜ್ಯ ಸರಕಾರ ಮಾತ್ರ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಸಂಪೂರ್ಣ ವಿಫಲವಾಗಿದೆ. ಅಲ್ಲದೇ ಜನರ ಪ್ರಾಣದ ಮೇಲೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕೆ.ಪಿ.ಸಿ.ಸಿ. ಯ ಮಾಜಿ ಕಾರ್ಯದರ್ಶಿ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಸಾವಿಗೀಡಾದ ಜನರ ಹೆಸರಲ್ಲಿ ಹಣ ಕೊಳ್ಳೆ ಹೊಡೆಯುತ್ತಿರುವುದು ಅತ್ಯಂತ ದುಃಖಕರವಾದ ವಿಷಯವಾಗಿದೆ ಎಂದು ಕೆ.ಪಿ.ಸಿ.ಸಿ.ಯ ಮಾಜಿ ಕಾರ್ಯದರ್ಶಿ ಹಾಗೂ ಕೊಡಗು ವಿರಾಜಪೇಟೆಯ ಬ್ಲಾಕ್ ಕಾಂಗ್ರೆಸ್‌ನ ಉಸ್ತುವಾರಿ ಟಿ.ಎಂ.ಶಾಹೀದ್ ತೆಕ್ಕಿಲ್ ಪತ್ರಿಕಾ ಗೋಷ್ಟಿಯಲ್ಲಿ ಆರೋಪಿಸಿದರು.

ಪ್ರಾಥಮಿಕ ಹಂತದಲ್ಲಿ ರೋಗವನ್ನು ನಿಯಂತ್ರಿಸುವಲ್ಲಿ ಸರಕಾರವು ವಿಫಲವಾಗಿದ್ದು, 4 ತಿಂಗಳು ಸರಕಾರ ಬೇಜವಬ್ದಾರಿಯಿಂದ ವರ್ತಿಸಿದ್ದರು ಕೂಡ ಕಾಂಗ್ರೆಸ್ ಪಕ್ಷ ಸರಕಾರಕ್ಕೆ ಸಂಪೂರ್ಣ ಸಹಕಾರ ನೀಡಿದೆ. ರಾಜ್ಯ ಸರಕಾರ ಮಾತ್ರ ರೋಗಿಗಳು ಹೆಚ್ಚಾದರೂ ಆಸ್ಪತ್ರೆಗಳಲ್ಲಿ ಬೆಡ್ ಗಳ, ಹಾಸಿಗೆಗಳ ಕೊರತೆ ,ಉಪಕರಣಗಳ ಕೊರತೆ ಮುಂತಾದ ಪ್ರಾಥಮಿಕ ಸೌಲಭ್ಯಗಳನ್ನು ನೀಡಲು ವಿಫಲವಾಗಿದೆ.

ಜನರು ಐ.ಟಿ., ಬಿ.ಟಿ.ಯಂತಹ ವಾಣಿಜ್ಯ ನಗರಿಯಾದ ಬೆಂಗಳೂರನ್ನು ತೊರೆಯುತ್ತಿದ್ದಾರೆ. ಸರಕಾರದಲ್ಲಿರುವ 8 ಸಚಿವರುಗಳು ಮತ್ತು ಅಧಿಕಾರಿಗಳು ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಒಂದೊಂದು ಹೇಳಿಕೆಗಳನ್ನು ನೀಡುತ್ತಾ ಪ್ರಚಾರವನ್ನು ಗಿಟ್ಟಿಸುವುದರಲ್ಲಿ ಮಗ್ನವಾಗಿದ್ದಾರೆ ಜನರ ಬಗ್ಗೆ ಯಾವುದೆ ಕಾಳಜಿ ಇಲ್ಲದೆ ಬಂಡವಾಳಶಾಹಿ ಮತ್ತು, ಶ್ರೀಮಂತರ ಪರ ಇರುವ ಸರಕಾರವಾಗಿದೆ. ಸಾಮಾನ್ಯ ಜನರ ತುರ್ತು ಆರೋಗ್ಯ ಪರಿಸ್ಥಿತೀಯ ಸಂದರ್ಭದಲ್ಲಿ ರಾಜ್ಯದಲ್ಲಿ ಸಾಮಾನ್ಯ ಜನರು ಮತ್ತು ಬಡವರು ಆರೋಗ್ಯ ಚಿಕೆತ್ಸೆಯಿಂದ ವಂಚಿಸಲ್ಪಟ್ಟಿದ್ದಾರೆ.

ಹೈಟೆಕ್ ಆಸ್ಪತ್ರೆಗಳಲ್ಲಿ ಚಿಕೆತ್ಸೆ ಪಡೆಯುವ ಶ್ರೀಮಂತರನ್ನು ನೋಡಿ ಅಧಿಕಾರಿಗಳು ಮತ್ತು ಸಚಿವರು ರೋಗ ಹತೋಟಿಯಲ್ಲಿ ಇದೆ ಎಂದು ಹೇಳಿಕೆಗಳನ್ನು ನೀಡುತ್ತಿರುವುದೇ ಹೊರತು ಬಡವರು, ಮಧ್ಯಮ ವರ್ಗದವರು ಚಿಕಿತ್ಸೆ ದೊರೆಯದೇ ದಿನಾ ಸಾವುಗೀಡಾಗುತ್ತಿರುವರ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲ. ಜನರು,ಆರ್ಥಿಕ ಪರಿಸ್ಥಿತೀ ಹದಗೆಟ್ಟಿರುವುದರಿಂದ ಮತ್ತು ರೋಗದಿಂದಾಗಿ ಭಯಬೀತರಾಗಿದ್ದು ಸರಕಾರದ ವಿರುದ್ಧ ರೊಸಿ ಹೋಗಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪನವರು ಮತ್ತು ಅವರ ಸಚಿವರುಗಳು ಕಮಿಷನ್ ದಂದೆಯಲ್ಲಿ ಕಾಲಹರಣ ಮಾಡುವುದಲ್ಲದೇ ಪಿ.ಪಿ.ಇ.ಕಿಟ್, ಸ್ಯಾನಿಟೈಸರ್ ,ಗ್ಲೌಸ್, ಮಾಸ್ಕ್, ಔಷಧಿ ಗಳು,ಬೆಡ್ ಗಳು,ವೆಂಟಿಲೇಟರ್, ಮತಿತ್ತರ ಉಪಕರಣಗಳ ಖರೀದಿಯಲ್ಲಿ 10ಪಟ್ಟು ಹೆಚ್ಚು ಹಣವನ್ನು ನೀಡುವ ದಂಧೆಯಲ್ಲಿ ಮಗ್ನರಾಗಿದ್ದಾರೆ ಇವರು ಮಾನವೀಯತೆ ನೆಲೆಯಲ್ಲಿ ಕೆಲಸ ಮಾಡದೇ ಇರುವುದರಿಂದಲೇ ಯಡಿಯೂರಪ್ಪನವರ ಸರಕಾರ ಸಂಪೂರ್ಣ ವಿಫಲವಾಗಿದೆ.

ರಾಜ್ಯ ಸರಕಾರ ಖಾಸಗಿ ವೈಧ್ಯಕೀಯ ಕಾಲೇಜುಗಳು ಮತ್ತು ಖಾಸಗಿ ಆಸ್ಪತ್ರೆಗಳನ್ನು ಹತೋಟಿಗೆ ತರುವಲ್ಲಿ ಸಂಪೂರ್ಣ ವಿಫಲವಾಗಿದ್ದು ಸರಕಾರ ಇವರ ಮೇಲೆ ಯಾವುದೆ ಕ್ರಮ ಕೈಗೊಳ್ಳದೆ ಸರಕಾರ ಸಂಪೂರ್ಣ ವೈಫಲ್ಯ ಹೊಂದಿದೆ ಎಂದು ಟಿ.ಎಂ.ಶಾಹೀದ್ ರವರು ಟೀಕಿಸಿದರು.

ಖಾಸಗಿ ಆಸ್ಪತ್ರೆಗಳು ಆರೋಗ್ಯ ತುರ್ತು ಪರಿಸ್ಥಿತಿಯ ಸಂಧರ್ಭದಲ್ಲಿ ಜನರನ್ನು ಲೂಟಿ ಹೂಡೆಯಲು ಸರಕಾರದ ಕೆಲವು ಸಚಿವರುಗಳು ಕೂಡ ಪರೋಕ್ಷ ಬೆಂಬಲವನ್ನು ನೀಡುತ್ತಿರುವುದನ್ನು ಅವರು ಖಂಡಿಸಿದರು. ಮುಖ್ಯಮಂತ್ರಿಗಳಿಗೆ ಸಚಿವರ ಮೇಲೆ ಮತ್ತು ಅಧಿಕಾರಿಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ ದಿನಂಪ್ರತಿ ಮುಖ್ಯಮಂತ್ರಿಗಳು ನಡೆಸುವ ಸಭೆಗಳು,ನಡವಳಿಗಳು ಕಾರ್ಯಗತವಾಗುತ್ತಿಲ್ಲ ಅದಕ್ಕೆ ಮುಖ್ಯಮಂತ್ರಿಗಳು ದಿನಂಪ್ರತಿ ನೀಡುತ್ತಿರುವ ಹೇಳಿಕೆಗಳ ನಿದರ್ಶನವಾಗಿದೆ.

ಸರಕಾರವು ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್-19 ರೋಗದ ಪ್ರಯೋಗಾಲಯವನ್ನು ಪ್ರಾರಂಬಿಸಿ 2 ಗಂಟೆಗಳಲ್ಲಿ ಫಲಿಂತಾಶವನ್ನು ನೀಡಲು ಮತ್ತು ಫಲಿತಾಂಶ ವಿಳಂಬವಾಗುವುದರಿಂದ ರೋಗ ಶ್ರೀಘ್ರವಾಗಿ ಹರುಡುವುದನ್ನು ಹತೋಟಿಗೆ ತರಬಹುದೆಂದು ಟಿ.ಎಂ.ಶಾಹೀದ್ ಸರಕಾರಕ್ಕೆ ವಿನಂತಿಸಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.