ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜು.21:ಮಧ್ಯಪ್ರದೇಶದಲ್ಲಿ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಬಿಜೆಪಿಯ ಮಾಜಿ ಹಿರಿಯ ನಾಯಕ ಲಾಲ್‍ಜಿ ಟಂಡನ್ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಉಸಿರಾಟ ತೊಂದರೆಯಿಂದ ಅವರು ಬಳಲುತ್ತಿದ್ದರು.
ತಂದೆಯ ಮರಣದ ವಿವರವನ್ನು ಅವರ ಪುತ್ರ ಅಶುತೋಷ್ ಟಂಡನ್ ತಿಳಿಸಿದ್ದಾರೆ. ಕಳೆದ ಜೂನ್ 11ಕ್ಕೆ ಉಸಿರಾಟ ತೊಂದರೆಗೊಳಾಗಿದ್ದರು. ಜೊತೆಗೆ ಅವರನ್ನೂ ಜ್ವರವೂ ಕಾಡಿತು. ಮೂತ್ರಕ್ಕೆ ಸಂಬಂಧಿಸಿ ಅನಾರೋಗ್ಯವು ಇತ್ತು. ಇವೆಲ್ಲ ಬಿಗಡಾಯಿಸಿದ್ದರಿಂದ ಆಸ್ಪತ್ರೆಗೆ ಸೇರಿಸಲಾಗಿತ್ತು. ಟಂಡನ್, ಮಾಯಾವತಿ ಹಾಗೂ ಕಲ್ಯಾಣ್ ಸಿಂಗ್ ಸರಕಾರದಲ್ಲಿ ಸಚಿವರಾಗಿದ್ದರು.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












