ಸನ್ಮಾರ್ಗ ವಾರ್ತೆ
ಟೆಹ್ರಾನ್,ಜು.29: ಇರಾನ್, ಅಮೆರಿಕ ಘರ್ಷಣೆಯು ಪ್ರತೀ ದಿವಸ ಬದಲಾವಣೆಗಳಿಲ್ಲದೇ ಮುಂದುವರಿಯುತ್ತಿದೆ. ಕಳೆದ ದಿವಸ ಹರ್ಮುಸ್ ಜಲಸಂಧಿಯಲ್ಲಿ ಪರೀಕ್ಷಾ ಹಾರಾಟ ನಡೆಸುತ್ತಿದ್ದ ಇರಾನ್ ವಿಮಾನಗಳು ಅಮೆರಿಕದ ವಿಮಾನ ವಾಹಿನಿ ಹಡಗಿನ ಮೇಲೆ ಮಿಸೈಲ್ ದಾಳಿ ಮಾಡಿದೆ.
ಮಂಗಳವಾರ ಇರಾನ್ ಸ್ಟೇಟ್ ಟೆಲಿವಿಷನ್ ಈ ವಿಷಯವನ್ನು ತಿಳಿಸಿದೆ. ಅಮೆರಿಕ ಇರಾನ್ಗಳ ನಡುವೆ ಇರುವ ಸಂಘರ್ಷ ಸ್ಥಿತಿಯ ನಡುವೆ ಅಮೆರಿಕಕ್ಕೆ ಬೆದರಿಕೆಯೊಡ್ಡುವ ಗುರಿಯಲ್ಲಿ ಇರಾನ್ ಯುದ್ಧ ವಿಮಾನಗಳ ಪರೀಕ್ಷಾ ಹಾರಾಟ ನಡೆಸುತ್ತಿದೆ. ಇದರ ವೀಡಿಯೊವನ್ನೂ ಇರಾನ್ ಹೊರಬಿಟ್ಟಿದೆ.
ಜಾಗತಿಕ ತೈಲೋತ್ಪಾದನೆಯ ಐದರಲ್ಲಿ ಒಂದರಷ್ಟು ತೈಲ ರವಾನೆಯಾಗುತ್ತಿರುವ ಹಡಗು ಮಾರ್ಗ ಹುರ್ಮುಸ್ ಜಲಸಂಧಿಯಾಗಿದೆ. ಇದೇವೇಳೆ, ಇರಾನ್ ದಾಳಿಯನ್ನು ಖಂಡಿಸಿ ಅಮೆರಿಕ ನೌಕಾಸೇನೆ ರಂಗಪ್ರವೇಶಿಸಿದ್ದು, ಇರಾನ್ ಬೇಜವಾಬ್ದಾರಿಯ ಮತ್ತು ನಿರ್ಲಕ್ಷ್ಯದ ಹಸ್ತಕ್ಷೇಪ ನಡೆಸುತ್ತಿದೆ ಎಂದು ಅಮೆರಿಕ ಆರೋಪಿಸಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












