ಇಸ್ರೇಲಿನ ತೆರಿಗೆ ವರಮಾನ ನಮಗೆ ಬೇಡ- ಫೆಲಸ್ತೀನ್

0
623

ಸನ್ಮಾರ್ಗ ವಾರ್ತೆ

ರಮಲ್ಲಾ,ಜು.29: ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದರೂ ಇಸ್ರೇಲಿನಿಂದ ಒಂದು ರೂಪಾಯಿಯನ್ನೂ ನಾವು ಸ್ವೀಕರಿಸುವುದಿಲ್ಲ ಎಂದು ಫೆಲಸ್ತೀನ್ ಹೇಳಿದೆ.

ಇಸ್ರೇಲಿನಿಂದ ಸಿಗುವ ತೆರಿಗೆ ವರಮಾನವನ್ನು ತನ್ನ ಸರಕಾರ ತಿರಸ್ಕರಿಸುತ್ತದೆ ಎಂದು ಫೆಲಸ್ತೀನ್ ಪ್ರಧಾನಿ ಮುಹಮ್ಮದ್ ಶಿತ್ವಿಯ್ಯ ಮಂಗಳವಾರ ಘೋಷಿಸಿದ್ದಾರೆ.

ವಾರದಲ್ಲಿ ನಡೆಯುವ ಫೆಲಸ್ತೀನ್ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ. ಇಸ್ರೇಲಿ ಅತಿಕ್ರಮಣಕಾರರೊಂದಿಗಿನ ಸಂಬಂಧವನ್ನು ನಾವು ಸಂಪೂರ್ಣ ನಿಲ್ಲಿಸಿದ್ದೇವೆ. ನಿಮಗೆ ಬ್ಲಾಕ್ ಮೈಲ್ ಮಾಡಲು ನಾವು ಬಿಟ್ಟುಕೊಡುವುದಿಲ್ಲ. ಆದ್ದರಿಂದ ಈ ತಿಂಗಳ ತೆರಿಗೆ ವರಮಾನ ನಾವು ಸ್ವೀಕರಿಸುವುದಿಲ್ಲ ಎಂದು ಶಿತ್ವಿಯ್ಯ ಹೇಳಿದರು.

ಕೊರೋನ, ಯುದ್ಧದಿಂದಾಗಿ ಫೆಲಸ್ತೀನಿನ ಆರ್ಥಿಕ ಕ್ಷೇತ್ರ ತೀವ್ರ ಮಾಂದ್ಯವನ್ನು ಎದುರಿಸುತ್ತಿದೆ. ಈ ವೇಳೆಯೇ ಫೆಲಸ್ತೀನ್ ಸರಕಾರ ತಮ್ಮ ನಿರ್ಧಾರವನ್ನು ಪ್ರಕಟಿಸಿದೆಯೆಂಬುದು ವಿಶೇಷ.

ವೆಸ್ಟ್ ಬ್ಯಾಂಕಿನ ಶೇ.30ರಷ್ಟು ಭಾಗವನ್ನು ವಶಪಡಿಸುವ ಯೋಜನೆಗೆ ಫೆಲಸ್ತೀನ್ ಈ ರೀತಿ ಉತ್ತರ ನೀಡಿದೆ. ಕಳೆದ ಮೇ ತಿಂಗಳಲ್ಲಿ ಫೆಲಸ್ತೀನ್ ಅಥಾರಿಟಿ ಇಸ್ರೇಲಿನೊಂದಿಗೆ ಸಹಿ ಹಾಕಿದ್ದ ಎಲ್ಲ ಒಪ್ಪಂದಗಳನ್ನು ತಾತ್ಕಾಲಿಕವಾಗಿ ರದ್ದು ಪಡಿಸಿತ್ತು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.