ಸನ್ಮಾರ್ಗ ವಾರ್ತೆ
ವಿಶಾಖಪಟ್ಟಣಂ,ಆ.3: ಆಂಧ್ರಪ್ರಧೇಶದ ವಿಸಿಯ ನಗರದಲ್ಲಿ ಮೂವರು ಕೊರೋನ ರೋಗಿಗಳನ್ನು ತ್ಯಾಜ ತುಂಬುವ ವ್ಯಾನ್‍ನಲ್ಲಿ ಆಸ್ಪತ್ರೆಗೆ ಸಾಗಿಸಿದ ಅಮಾನವೀಯ ಘಟನೆಯೊಂದು ವರದಿಯಾಗಿದೆ.
ಇರಾಜಪುಪೇಟ ಗ್ರಾಮದಲ್ಲಿ ಶುಕ್ರವಾರ ಕೊರೋನ ಪಾಸಿಟಿವ್ ಆಗಿರುವ ರೋಗಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೊಂಡು ಹೋಗಲು ವೈದ್ಯರು ಶಿಫಾರಸು ಮಾಡಿದ್ದರು. ನಂತರ ಇವರನ್ನು ತ್ಯಾಜ್ಯ ಸಾಗಿಸುವ ವ್ಯಾನಿನಲ್ಲಿ ಯಾವುದೇ ಸುರಕ್ಷಾ ಕ್ರಮಗಳನ್ನು ಅನುಸರಿಸದೇ ಕರೆದುಕೊಂಡು ಹೋಗಲಾಗಿದೆ ಎಂದು ವರದಿಯಾಗಿತ್ತು. ಈ ಘಟನೆಯು ವರದಿಯಾದ ಬೆನ್ನಿಗೆ ಜಿಲ್ಲಾ ವೈದ್ಯಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ.
ಕೊಂಡು ವೆಲುಗಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಬಂದಿದ್ದ ಕೊರೋನ ರೋಗಿಗಳನ್ನು ನೆಲ್ಲಿಮರ್ಲ ನಿಂಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಲಾಗಿತ್ತು. ವೈದ್ಯರು ಆಂಬುಲೆನ್ಸ್ ಕರೆ ಮಾಡಿದರೂ ರೋಗಿಗಳ ಸಂಬಂಧಿಕರೊಬ್ಬರು ಇವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ವಹಿಸಿಕೊಂಡಿದ್ದಾನೆ. ನಂತರ ಆಸ್ಪತ್ರೆ ಸಿಬ್ಬಂದಿ ಇವರಿಗೆ ಪಿಪಿಇ ಕಿಟ್ ನೀಡುವುದಾಗಿ ಹೇಳಿದರು. ತ್ಯಾಜ ತುಂಬುವ ವಾಹನದ ಚಾಲಕ ಪಿಪಿಇ ಕಿಟ್ ಧರಿಸಿದ್ದ. ಆದರೆ ರೋಗಿಗಳಿಗೆ ಮಾಸ್ಕ್ ಕೂಡ ಇರಲಿಲ್ಲ. ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಕೊರೋನ ಪ್ರೊಟೊಕಾಲ್ ಪಾಲಿಸದೇ ರೋಗಿಗಳನ್ನು ತೆರೆದ ವಾಹನದಲ್ಲಿ ಕಳುಹಿಸಿದ ವೈದ್ಯರ ವಿರುದ್ಧ ತನಿಖೆ ನಡೆಸುವುದಾಗಿ ವಿಸಿಯನಗರ ಜಿಲ್ಲಾ ವೈದ್ಯಾಧಿಕಾರಿ ಡಾ.ರಮಣ ಕುಮಾರಿ ತಿಳಿಸಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












