ಸನ್ಮಾರ್ಗ ವಾರ್ತೆ
ರಾಜಸ್ಥಾನ,ಆ.4: ಹೊಸದಾಗಿ ಖರೀದಿಸಿದ ಬೈಕ್ನಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಅದನ್ನು ರಿಪೇರಿ ಮಾಡಿಕೊಡದ ಡೀಲರ್ಶಿಪ್ ವಿರುದ್ಧ ಯುವಕನೊಬ್ಬ ಕತ್ತೆಗಳೊಂದಿಗೆ ಬಂದು ಪ್ರತಿಭಟನೆ ಮಾಡಿದ್ದಾನೆ.
ಉದಯಪುರದ ಜಾವ ಡೀಲರ್ಶಿಪ್ ಮುಂದೆ ಯುವಕ ಕತ್ತೆಗಳನ್ನು ನಿಲ್ಲಿಸಿ ವಿನೂತ ಶೈಲಿಯ ಪ್ರತಿಭಟನೆ ಮಾಡಿದ್ದಾನೆ. ರಾಜಸ್ಥಾನದ ಪಖಡ್ ಎಂಬಲ್ಲಿನ ಅಭಯ್ ಸಿಂಗ್ 2019 ಸೆಪ್ಟಂಬರಿನಲ್ಲಿ ಉದಯಪುರ ಶೋ ರೂಮ್ನಿಂದ ಜಾವ 42 ಕ್ರೂಯಿಸರ್ ಬೈಕ್ ಖರೀದಿಸಿದ್ದರು.
ಕೆಲವು ದಿವಸಗಳೊಳಗೆ ಒಂದು ದಿನ ಬೈಕ್ ಓಡುತ್ತಿದ್ದ ವೇಳೆ ಬೈಕ್ ದಾರಿಯಲ್ಲಿಯೇ ನಿಂತಿತು. ಅದನ್ನು ಪುನಃ ಬೇರೆ ವಾಹನದಲ್ಲಿ ಹಾಕಿ ವರ್ಕ್ ಶಾಪ್ಗೆ ಕೊಂಡು ಹೋಗಿದ್ದರು. ಎಂಟು ತಿಂಗಳಲ್ಲಿ ಎರಡು ಬಾರಿ ಇದೇ ರೀತಿಯಾಗಿದ್ದು, ಡೀಲರ್ನ್ನು ಸಮೀಪಿಸಿದರೂ ಅವರು ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಅಭಯ್ ಸಿಂಗ್ ಹೇಳಿದರು. ನಾವು ಇನ್ನೇನು ಮಾಡಲು ಆಗುವುದಿಲ್ಲ ಎಂದು ಡೀಲರ್ ಹೇಳಿದ್ದರು.
ವಿವಾದ ಕಂಪೆನಿಯ ಗಮನಕ್ಕೆ ತಂದಾಗಲೂ ಸೂಕ್ತ ಸ್ಪಂದನೆ ಇರಲಿಲ್ಲ. ಇದರೊಂದಿಗೆ ಕತ್ತೆಗಳೊಂದಿಗೆ ಅವರು ಶೋ ರೂಮ್ ಮುಂದೆ ಪ್ರತಿಭಟಿಸಿ ಗಮನ ಸೆಳೆದಿದ್ದಾರೆ. ಇದರ ಫೋಟೊ ಮತ್ತು ದೂರಿನ ಪ್ರತಿಯೊಂದಿಗೆ ಅಭಯ್ ಸಿಂಗ್ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಸಿ.












