ಸನ್ಮಾರ್ಗ ವಾರ್ತೆ
ಜಲಂಧರ್,ಆ.4: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಅಂಗವಾಗಿ ಆಗಸ್ಟ್ 5ಕ್ಕೆ ನಡೆಯುವ ಭೂಮಿ ಪೂಜೆಯಲ್ಲಿ ಸಿಖ್ ಧರ್ಮೀಯರು ಭಾಗವಹಿಸುವುದಿಲ್ಲ ಎಂದು ಸಿಖ್ ಖಾಲ್ಸ ಪ್ರತಿನಿಧಿ ಧ್ಯಾನ್ ಸಿಂಗ್ ಮಂಡ್ ತಿಳಿಸಿದ್ದಾರೆ.
ಹಿಂದೂ,ಮುಸ್ಲಿಂ ಧರ್ಮೀಯರನ್ನು ಒಂದೇ ರೀತಿ ಗೌರವಿಸುತ್ತೇವೆ ವಿವಾದ ಜಮೀನು ವಿಷಯದಲ್ಲಿ ಎರಡು ವಿಭಾಗಗಳ ನಡುವೆ ಇರುವ ಅಸಮಾಧಾನ ಮಧ್ಯಸ್ಥಿಕೆಗೆ ಸಿಖ್ ಸಮುದಾಯ ಸಿದ್ಧವಿದೆ ಎಂದು ಧ್ಯಾನ್ ಸಿಂಗ್ ಹೇಳಿದರು.
ಅಯೋಧ್ಯೆ ಭೂಮಿ ವಿವಾದದಲ್ಲಿ ಎರಡು ವಿಭಾಗಗಳಿಂದ ಹಲವಾರು ಮಂದಿ ಜೀವ ಕಳಕೊಂಡಿದ್ದಾರೆ. ಇತರರಿಗಾಗಿ ತ್ಯಾಗ ಮಾಡಲು ಸಿದ್ಧವಿರುವ ಸಿಖ್ ಸಮುದಾಯ ಈ ವಿಷಯದಲ್ಲಿ ಎರಡು ವಿಭಾಗದವರನ್ನು ಒಪ್ಪುವುದಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬುಧವಾರ ಅಯೋಧ್ಯೆಯಲ್ಲಿ ನಡೆಯುವ ಭೂಮಿ ಪೂಜೆಯಲ್ಲಿ ಪ್ರಧಾನಿ ಮೋದಿ ಶಿಲಾನ್ಯಾಸ ನಿರ್ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ 150ರಷ್ಟು ಮಂದಿಗೆ ರಾಮಮಂದಿರ ಟ್ರಸ್ಟ್ ಕರೆಯೋಲೆ ನೀಡಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












