ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಆ.4: ದೇಶದ ರಾಜಧಾನಿ ಹೊತ್ತಿ ಉರಿಯುವಾಗ ಸುಪ್ರೀಂಕೋರ್ಟು ಕೇವಲ ನೋಡುಗನ ಪಾತ್ರವಹಿಸಿತು ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.
ಕೋರ್ಟಿನ ಲೋಪವನ್ನು ಬೆಟ್ಟು ಮಾಡಿ ಕ್ಷಮೆ ಕೇಳಲು ಸಿದ್ಧನಲ್ಲ ಎಂದು ಅವರು ಸುಪ್ರೀಂಕೋರ್ಟಿಗೆ ತಿಳಿಸಿದರು.
ಸುಪ್ರೀಂಕೋರ್ಟಿನ ಚೀಫ್ ಜಸ್ಟಿಸ್ ಎಸ್ಐ ಬೊಬ್ಡೆಯವರನ್ನು ವಿಮರ್ಶಿಸಿ ಟ್ವೀಟ್ ಮಾಡಿರುವುದಕ್ಕೆ ತನ್ನ ವಿರುದ್ಧ ಆರಂಭವಾದ ಕೋರ್ಟು ಇಂದೇ ಕ್ರಮಕ್ಕೆ ಅಫಿದಾವಿತ್ ಮೂಲಕ ಕೋರ್ಟಿನ ಗಂಭೀರ ತಪ್ಪನ್ನು ಪ್ರಶಾಂತ್ ಭೂಷಣ್ ಬೆಟ್ಟು ಮಾಡಿದ್ದಾರೆ.
ತನ್ನ ಅಭಿಪ್ರಾಯ ಪ್ರಕಟನೆಯು ಸಂವಿಧಾನದ ಕೊಡ ಮಾಡಿದ ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿದೆ ಎಂದು ಪ್ರಶಾಂತ್ ಭೂಷಣ್ ಹೇಳಿದರು.
ಈಗಿರುವ ಸುಪ್ರೀಂಕೋರ್ಟು ಜಡ್ಜ್ಗಳು ಅಭಿಪ್ರಾಯ ಸ್ವಾತಂತ್ರ್ಯದ ಕುರಿತು ಇತ್ತೀಚೆಗೆ ನೀಡಿದ ಭಾಷಣದ ಭಾಗಗಳನ್ನು ಸಾಕ್ಷ್ಯವಾಗಿ ಪ್ರಶಾಂತ್ ಭೂಷಣ್ ಅಫಿದಾವಿತ್ನಲ್ಲಿ ಬೆಟ್ಟು ಮಾಡಿದ್ದಾರೆ.
ಫೆಬ್ರುವರಿ 15ಕ್ಕೆ ಜಸ್ಟಿಸ್ ಡಿವೈ ಚಂದ್ರಚೂಡಾರವರು, ಫೆಬ್ರುವರಿ 24ಕ್ಕೆ ಜಸ್ಟಿಸ್ ದೀಪಕ್ ಗುಪ್ತಾ ನೀಡಿದ ಭಾಷಣಗಳು ತನ್ನ ವಾದಕ್ಕೆ ಆಧಾರವಾಗುತ್ತಿದೆ ಎಂದು ಭೂಷಣ್ ವಾದಿಸಿದ್ದಾರೆ. ಟೀಕೆಗಳನ್ನು ದೇಶದ್ರೋಹ ಆಗುವುದನ್ನು ವಿರೋಧಿಸಿ ಜಸ್ಟಿಸ್ ಚಂದ್ರಚೂಡಾರು ಭಾಷಣ ನೀಡಿ ಒಂದು ವಾರದ ಬಳಿಕ ದಿಲ್ಲಿಯಲ್ಲಿ ಗಲಭೆ ನಡೆಯಿತು. ಮಸೀದಿ ನಾಶಪಡಿಸಲಾಯಿತು. ಬೆಂಕಿ ಹಚ್ಚಲಾಯಿತು.
ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ನಾಶಪಡಿಸಿದ್ದಾರೆ. ಕಲ್ಲೆಸೆತದಲ್ಲಿ ತಾವೂ ಸೇರಿಕೊಂಡಿದ್ದಾರೆ. ಆದರೆ, ಸುಪ್ರೀಂಕೋರ್ಟು ವೀಕ್ಷಕನಂತೆ ಉಳಿಯಿತು. ಚೀಫ್ ಜಸ್ಟಿಸ್ ಎಸ್ಎ ಬೊಬ್ಡೆ, ಬಿಜೆಪಿ ನಾಯಕನ ಮಗನ ದುಬಾರಿ ಬೈಕ್ನಲ್ಲಿ ಹತ್ತಿ ಕುಳಿತ ಚಿತ್ರವನ್ನು ಟ್ವೀಟ್ನಲ್ಲಿ ಹಂಚಿಕೊಂಡು ಅಭಿಪ್ರಾಯ ವ್ಯಕ್ತಪಡಿಸಿದ್ದು, ಭೂಷಣ್ ವಿರುದ್ಧ ಕೋರ್ಟು ನಿಂದೆ ಕೇಸಿಗೆ ಕಾರಣವಾಗಿದೆ.
ಲಾಕ್ಡೌನ್ನಿಂದ ಕೋರ್ಟುಗಳನ್ನು ನಿಯಂತ್ರಿಸಿ ಲಕ್ಷಾಂತರ ಜನರಿಗೆ ನ್ಯಾಯ ನಿರಾಕರಿಸುವಾಗ ಹೆಲ್ಮೆಟ್ ಮಾಸ್ಕ್ ಇಲ್ಲದೆ ಚೀಫ್ ಜಸ್ಟಿಸ್ ಮೋಟಾರು ಸೈಕಲ್ ಚಲಾಯಿಸುತ್ತಿದ್ದಾರೆ ಎಂದು ಟ್ವೀಟ್ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದರು.
ಟ್ವೀಟರ್ನ ವಾಸ್ತವಕ್ಕೆ ವಿರುದ್ಧವಾದ ಭಾಗಕ್ಕೆ ಅಂಶಿಕ ಕ್ಷಮಾಪಣೆ ಕೇಳಲು ಸಿದ್ಧ ಎಂದು ಪ್ರಶಾಂತ್ ಭೂಷಣ್ ಅಫಿದಾವಿತ್ನಲ್ಲಿ ತಿಳಿಸಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












