ರಾಮ ಮಂದಿರದ ಮತ್ತೋರ್ವ ಅರ್ಚಕರಿಗೆ ಕೊರೋನ; ಹೆಚ್ಚಿದ ಆತಂಕ

0
535

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.4: ರಾಮಂದಿರದ ಮತ್ತೋರ್ವ ಅರ್ಚಕರಿಗೆ ಕೊರೋನ ದೃಢಪಟ್ಟಿದೆ. ರಾಮ ಜನ್ಮ ಭೂಮಿಯ ಸಹಾಯಕ ಅರ್ಚಕ ಪ್ರೇಮ್ ಕುಮಾರ ತಿವಾರಿಯವರಿಗೆ ಕೊರೋನ ದೃಢಪಟ್ಟಿದೆ. ಇದರೊಂದಿಗೆ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಸ್ವಯಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

ರಾಮ ಮಂದಿರ ಭೂಮಿಪೂಜೆಗೆ ಪ್ರಧಾನಿ ನರೇಂದ್ರ ಮೋದಿ ನಾಳೆ ಅಯೋಧ್ಯೆಗೆ ಬರಲಿದ್ದು ಮತ್ತೋರ್ವ ಅರ್ಚಕರಿಗೂ ಕೂಡ ಕೊರೋನ ದೃಢಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ವರದಿಗಳು ತಿಳಿಸಿವೆ. ಈ ಹಿಂದೆ ಅರ್ಚಕ ಪ್ರದೀಪ್ ದಾಸ್ ಸಹಿತ ಹದಿನಾರು ಸುರಕ್ಷಾ ಸಿಬ್ಬಂದಿಗಳಿಗೆ ಕೊರೋನ ದೃಢಪಟ್ಟಿತ್ತು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.