ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಆ.4: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದು ಹಾಕಿ ಒಂದು ವರ್ಷ ಆಗಿರುವುದರಿಂದ ಎರಡು ದಿವಸಗಳ ಕಾಲ ಕಾಶ್ಮೀರದಲ್ಲಿ ಕರ್ಫ್ಯೂ ಘೋಷಣೆಯಾಗಿದೆ. ಬುಧವಾರದಿಂದ ಶ್ರೀನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ ಕರ್ಫ್ಯೂ ಘೋಷಿಸಿದ್ದಾರೆ.
ಪ್ರತ್ಯೇಕತಾ ವಾದಿಗಳು ಪಾಕಿಸ್ತಾನ ಪ್ರಾಯೋಜಿತ ಸಂಘಟನೆಗಳು ಆಗಸ್ಟ್ ಐದಕ್ಕೆ ಕಪ್ಪು ದಿನ ಆಚರಿಸಲಿದ್ದಾರೆ ಎಂದು ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕರ್ಫ್ಯೂ ಹೇರಲಾಗಿದೆ ಎಂದು ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.
ಕಾಶ್ಮೀರ ಕಣಿವೆಯಾದ್ಯಂತ ಕರ್ಫ್ಯೂ ಅನ್ವಯವಾಗಲಿದೆ. ಕೊರೋನ ಕಾರಣಕ್ಕಾಗಿ ಆವಶ್ಯಕ ಸೇವೆಗಳಿಗೆ ಅನುಮತಿ ನೀಡುವುದಾಗಿ ಅವರು ಹೇಳಿದರು. ಪ್ರತಿಭಟನೆ ಆಗುವುದನ್ನು ನಿರಾಕರಿಸಲಾಗದು. ಸಾರ್ವಜನಿಕರಿಗೆ ಸ್ವಯಂ ನಾಶ ತರುವ ಅಕ್ರಮಾಸಕ್ತ ಪ್ರತಿಭಟನೆಯ ಕುರಿತು ವಿವರ ಸಿಕ್ಕಿದೆ ಎಂದು ಮ್ಯಾಜಿಸ್ಟ್ರೇಟ್ ತಿಳಿಸಿದರು.
ಆಗಸ್ಟ್ 2019 ಐದಕ್ಕೆ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ರದ್ದು ಪಡಿಸಲಾಗಿತ್ತು. ತದನಂತರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಜಮ್ಮು ಕಾಶ್ಮೀರವನ್ನು ವಿಭಜಿಸಲಾಗಿದೆ. ನಂತರ ಇಡೀ ರಾಜ್ಯದಲ್ಲಿ ಕರ್ಫ್ಯೂ ಹೇರಲಾಗಿತ್ತು. ಇದರ ವಿರುದ್ಧ ಬೃಹತ್ ಪ್ರತಿಭಟನೆಯೂ ನಡೆದಿತ್ತು. ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಸಹಿತ ನೂರಾರು ರಾಜಕೀಯ ನಾಯಕರನ್ನು ಬಂಧಿಸಿ ಗೃಹ ಬಂಧನದಲ್ಲಿರಿಸಲಾಗಿದೆ. ಮಾರ್ಚ್ 11 ರಂದು ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಲಾಗಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












